ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮುಸ್ಲಿಂ ಹೆಣ್ಣುಮಕ್ಕಳು, ವಿಧವೆಯರಿಗೆ ಸಹಾಯ ಧನ

Rashmi Kasaragodu
Updated On : 3 Oct 2013, 12:22 pm

ಹಾಸನ: ಪ್ರಸಕ್ತ ಸಾಲಿನಿಂದ ಅಲ್ಪಸಂಖ್ಯಾತರ ಮುಸ್ಲಿಂ ಹೆಣ್ಣು ಮಕ್ಕಳಿಗೆ, ವಿಚ್ಚೇಧಿತ ಮಹಿಳೆ ಮತ್ತು ವಿಧವೆಯರಿಗೆ ವೈಯಕ್ತಿಕ ಹಾಗೂಸಾಮೂಹಿಕ ಮದುವೆ ಕಾರ್ಯಗಳಿಗೆ ವಿವಾಹ ಖರ್ಚು ವೆಚ್ಚಗಳು, ಜೀವನಾವಶ್ಯಕ ಸಾಮಗ್ರಿಗಳು ಅಥವಾ ನಗದು ಮತ್ತು ಸಾಮಗ್ರಿ ನೀಡಲು 50 ಸಾವಿರ ರು. ಸಹಾಯಧನ ನೀಡುವ ಹೊಸ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.
ಕುಟುಂಬದ ವಾರ್ಷಿಕ ಆದಾಯ 1.50ಲಕ್ಷ ರು.ಗಿಂತ  ಕಡಿಮೆ ಇರುವಂತಹ ಇಚ್ಚೆವುಳ್ಳ ಮುಸ್ಲಿಂ ಅಭ್ಯರ್ಥ್ಥಿಗಳು, ಫಲಾನುಭವಿಗಳು ಮಾಹಿತಿ ಮತ್ತು ಇತರೆ ನಿಬಂಧನೆಗಳಿಗೆ ಜಿಲ್ಲಾ ಅಧಿಕಾರಿಗಳು, ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಎಚ್.ಕೆ.ಬಿ.ವಾಣಿಜ್ಯ ಸಂಕೀರ್ಣ, 2ನೇ ಮಹಡಿ, 23ನೇ ಅಡ್ಡರಸ್ತೆ, ಕುವೆಂಪುನಗರ, ಹಾಸನ ಇವರನ್ನು ಭೇಟಿ ಮಾಡಿ ಅರ್ಜಿ ಪಡೆಯಬೇಕೆಂದು ಜಿಲ್ಲಾ ಅಧಿಕಾರಿ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಸನ ಇವರು ಕೋರಿದ್ದಾರೆ.
ಸಂಪರ್ಕಿಸಬೇಕಾದ ದೂ 08172-268372. ಮಾಹಿತಿ ಇಲಾಖಾ ವೈಬ್ಸೈಟ್ ಢಿಢಿಢಿ.್ಜ್ಟ್ಞಜ್ಟಟ.್ಛ್ಟಟ  ನಲ್ಲಿಯೂ ಪಡೆಯಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement