ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಾಷ್ಟ್ರಮಟ್ಟಕ್ಕೆ ಯೋಗಶ್ರೀ ಆಯ್ಕೆ

Rashmi Kasaragodu
Updated On : 3 Oct 2013, 12:25 pm

ಚನ್ನರಾಯಪಟ್ಟಣ: ಬಾಲವಿಜ್ಞಾನಿಗಳನ್ನು ಪತ್ತೆ ಹಚ್ಚುವ ಸಲುವಾಗಿ ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ನಡೆದ ರಾಜ್ಯ ಮಟ್ಟದ ಇನ್ಸ್ಪೈರ್ ಅವಾರ್ಡ್ ಪ್ರತಿಭಾ ಪ್ರದರ್ಶನದಲ್ಲಿ ಪಟ್ಟಣದ ಶಾಲಿನಿ ವಿದ್ಯಾಶಾಲೆಯ ವಿದ್ಯಾರ್ಥಿನಿ ಯೋಗಶ್ರೀ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
 ಶಿವಮೊಗ್ಗದಲ್ಲಿ ನಡೆದ ರಾಜ್ಯ ಮಟ್ಟದ ಪ್ರೌಢಶಾಲಾ ಮಟ್ಟದ ಪ್ರತಿಭಾ ಪ್ರದರ್ಶನದಲ್ಲಿ ಬರ್ನೋಲಿಯನ್ ತತ್ವದಡಿಯಲ್ಲಿ ಮಂಡಿಸಿದ ವಸ್ತು ಪ್ರದರ್ಶನದಲ್ಲಿ ಆಯ್ಕೆ ಮಾಡಿದ್ದಾರೆ.
 ಅ.8ರಿಂದ 10ರ ವರೆಗೆ ನವದೆಹಲಿಯಲ್ಲಿ ನಡೆಯಲಿರುವ ವಸ್ತು ಪ್ರದರ್ಶನಕ್ಕೆ ಆಯ್ಕೆಯಾಗಿರುವ ಯೋಗಶ್ರೀ ಅವರಿಗೆ ಪೋಷಕರು, ಶಾಲಾ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
  ಪ್ರಶಸ್ತಿ ಪಡೆದ ಯೋಗಶ್ರೀ ಮಾತನಾಡಿ ಹೆಲಿಕ್ಯಾಪ್ಟರ್ ಹಾಗೂ ವಿಮಾನಗಳಲ್ಲಿ ಅಳವಡಿಸಿರುವ ಫ್ಯಾನ್ಗಳನ್ನು ಮುಂದಿಟ್ಟುಕೊಂಡು ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಅದನ್ನು ಅಳವಡಿಸಿದರೆ ಇಂಧನ ಉಳಿತಾಯವಾಗುತ್ತದೆ ಎಂಬುದೇ ತಮ್ಮ ಪ್ರದರ್ಶನದ ಗುರಿಯಾಗಿದೆ.
 ವಾಹನಗಳು ವೇಗವಾಗಿ ಸಂಚರಿಸುವ ಸಂದರ್ಭದಲ್ಲಿ ಗಾಳಿ ಎದುರಾಗುವುದರಿಂದ ವಾಹನದ ವೇಗ ಕಡಿಮೆಯಾಗುತ್ತದೆ. ಅದನ್ನು ಹೆಚ್ಚಿಸುವ ಸಲುವಾಗಿ ಹೆಚ್ಚು ಎಕ್ಸ್ಲೆಟರ್ ಕೊಡಬೇಕಾಗುತ್ತದೆ. ವಾಹನದ ಮುಂದೆ ಫ್ಯಾನ್ಗಳನ್ನು ಅಳವಡಿಸುವುದರಿಂದ ಗಾಳಿಯ ವೇಗಕ್ಕೆ ಫ್ಯಾನ್ ತಿರುಗಿ ಗಾಳಿಯನ್ನು ಹಿಂದೆ ಹಾಗೂ ಪಕ್ಕಕ್ಕೆ ತಳ್ಳುವುದರಿಂದ ವಾಹನ ವೇಗವಾಗಿ ಚಲಿಸಲು ಸಹಾಯಕವಾಗುತ್ತದೆ.  ನವದೆಹಲಿಯಲ್ಲಿಯೂ ಇದೇ ಪ್ರದರ್ಶವನ್ನು ಮಾಡಲಾಗುವುದು ಎಂದು ತಿಳಿಸಿದರು. ಸಂಸ್ಥೆ ಅಧ್ಯಕ್ಷ ನಂಜುಂಡೇಗೌಡ, ಕಾರ್ಯದರ್ಶಿ ಅಶೋಕ್, ಗೈಡ್ ಚಿದಾನಂದ್, ಮುಖ್ಯ ಶಿಕ್ಷಕಿ ಮಮತಾ ಮೊದಲಾದವರು ಇದ್ದರು.
ಇಂದು ವಿರಾಸತ್ ಘಟಕ ಉದ್ಘಾಟನೆ
ಸಕಲೇಶಪುರ: ಕನ್ನಡ ಮನಸು ಒಟ್ಟುಗೂಡಿಸುವ ಉದ್ದೇಶದಿಂದ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಘಟಕಗಳನ್ನು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲೂ ಪ್ರಾರಂಭಿಸಲಾಗುತ್ತಿದೆ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕಾರ್ಯದರ್ಶಿ ನಾಗರಾಜಶೆಟ್ಟಿ ಹೇಳಿದರು. ಮೂಡಬಿದಿರೆಯಲ್ಲಿ ಡಿಸೆಂಬರ್ನಲ್ಲಿ ನಡೆಯಲಿರುವ ನಾಲ್ಕು ದಿನಗಳ ವಿಶ್ವ ನುಡಿಸಿರಿ ವಿರಾಸತ್ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಜನರನ್ನು ಸೇರಿಸುವ ಉದ್ದೇಶವಿದೆ.
 ಈ ನಿಟ್ಟಿನಲ್ಲಿ ವಿರಾಸತ್ ಘಟಕಗಳನ್ನು ಪ್ರಾರಂಭಿಸುವ ಮೂಲಕ ಪ್ರಚಾರ ನಡೆಸಲಾಗುತ್ತಿದೆ. ತಾಲೂಕಿನಲ್ಲಿ ಅ.3 ರಂದು ಪಟ್ಟಣದ ರೋಟರಿ ಆಂಗ್ಲಶಾಲೆಯಲ್ಲಿ ಘಟಕದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಇದರ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಉಪಾಧ್ಯಕ್ಷ ಯದುರಾಜಶೆಟ್ಟಿ, ಡಾ. ಮೋಹನ್ದಾಸ್ಶೆಟ್ಟಿ, ನಂಜಮ್ಮ ಮಹಿಳಾ ಸಮಾಜದ ಅಧ್ಯಕ್ಷೆ ಚನ್ನವೇಣಿ ಶೆಟ್ಟಿ ಇತರರು ಇದ್ದರು.
ಮದ್ಯ ಮಾರಾಟ: ಠಾಣೆ ಮುಂದೆ ಧರಣಿ
ಜಾವಗಲ್: ಕರಗುಂದ ಗ್ರಾಮದ ಚಿಲ್ಲರೆ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ಸ್ತ್ರೀಶಕ್ತಿ ಸಂಘಗಳ ಮಹಿಳೆಯರು  ಠಾಣೆ ಮುಂದೆ ಬುಧವಾರ  ಧರಣಿ ನಡೆಸಿದರು. ಗ್ರಾಮದ ಚಿಲ್ಲರೆ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ವಾಗುತ್ತಿದ್ದು, ಕೂಡಲೇ  ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದನ್ನು ಆದಷ್ಟು ಬೇಗ ದಾಳಿ ನಡೆಸಿ, ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟಿ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿದರು. ಗ್ರಾಮ ಪಂಚಾಯ್ತಿ  ಸದಸ್ಯರಾದ ಯಶೋಧಮ್ಮ, ರೂಪ, ಮಂಜುಳಾ, ಲತಾ ಸೇರಿದಂತೆ ಸುಮಾರು 60 ಕ್ಕೂ ಹೆಚ್ಚು ಮಹಿಳೆಯರು ಪ್ರತಿಭಟನೆ ನಡೆಸಿ ಪೊಲೀಸ್ ಠಾಣಾಧಿಕಾರಿ ಮಹೇಶ್  ಅವರನ್ನು ಭೇಟಿ ಮಾಡಿ  ಮನವಿ ಪತ್ರ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement