ಶೋಷಿತರ, ದುರ್ಬಲರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ದೀನದಯಾಳ್'
ಅರಸೀಕೆರೆ: ಶಿಸ್ತು, ಸಂಯಮ, ಸಂಘಟನಾ ಶಕ್ತಿಯ ಮೂಲಕ ರಾಷ್ಟ್ರಪ್ರೇಮವನ್ನು ಮೆರೆದ ಪಂಡಿತ ದೀನದಯಾಳ್ ಉಪಾಧ್ಯಾಯರು ಇಂದಿಗೂ ಜನಸಾಮಾನ್ಯರ ಮನಸ್ಸಿನಲ್ಲಿ ಉನ್ನತ ಸ್ಥಾನ ಪಡೆದು ಕೊಂಡಿದ್ದಾರೆ ಎಂದು ಬಿಜೆಪಿ ವಕ್ತಾರ ಹಾಗೂ ವಕೀಲ ಎನ್.ಡಿ.ಪ್ರಸಾದ್ ತಿಳಿಸಿದರು.ದೀನದಯಾಳರ ಜನ್ಮ ದಿನಾಚರಣೆ ಅಂಗವಾಗಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಮಾತನಾಡಿದ ಅವರು ದೀನದಯಾಳರದ್ದು ಧೀಮಂತ ವ್ಯಕ್ತಿತ್ವ, ಅಗಾಧ ರಾಷ್ಟ್ರಪ್ರೇಮ, ಹಿಂದುಳಿದವರ ಶೋಷಿತರ ಹಾಗೂ ದುರ್ಬಲರ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದ ಅವರು, ದಶಕಗಳ ಕಾಲದಿಂದಲೂ ತಮ್ಮದೇ ವ್ಯಕ್ತಿತ್ವದ ಮೂಲಕ ಛಾಪು ಮೂಡಿಸಿದ್ದ ಧೀಮಂತ ನಾಯಕರೂ ಆಗಿದ್ದರು. ಹಾಗೂ ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಸರಳ ಜೀವನ ನಡೆಸಿ ಇತರರಿಗೆ ಮಾದರಿಯಾಗಿದ್ದರು ಎಂದು ಹೇಳಿದರು.ನಗರ ಶಕ್ತಿಕೇಂದ್ರದ ಅಧ್ಯಕ್ಷ ಹಾಗೂ ವಕೀಲ ಕೆ.ವಿ.ಹಿರಿಯಣ್ಣ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ಬ್ರಿಟೀಷರ ಪಾಲಿಗೆ ಸಿಂಹಸ್ವಪ್ನರಾಗಿದ್ದರು ಎಂದು ಬಣ್ಣಿಸಿದರು. ಎಪಿಎಂಸಿ ಸದಸ್ಯ ದುಮ್ಮೇನಹಳ್ಳಿ ಗಂಗಾಧರ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್, ತಾಲೂಕು ಅಧ್ಯಕ್ಷ ಹರಳಕಟ್ಟ ರಮೇಶ್, ಮುಖಂಡ ಕೆ.ಎನ್.ದುರ್ಗಪ್ಪಶೆಟ್ಟಿ ಮಾತನಾಡಿದರು. ನಗರ ಕಾರ್ಯದರ್ಶಿ ಚೇತನ್, ಮನೋಜಕುಮಾರ್, ಜಿ.ಜಿ.ಲೋಕೇಶ್, ವೈ.ಕೆ.ದೇವರಾಜ್, ಮುರಳಿಧರ್ ಇತರರು ಇದ್ದರು.
ಅನವಶ್ಯಕವಾಗಿ ಮಕ್ಕಳಿಗೆ ಅಮೀಬಿಯಾ ಔಷಧಿ ನೀಡುವ ಅಗತ್ಯವಿಲ್ಲ: ಡಾ. ಸುಧೀರ್
ಹೊಳೆನರಸೀಪುರ: ಮಕ್ಕಳಲ್ಲಿ ಹೆಚ್ಚಾಗಿ ರೋಟಾ ವೈರಸ್ನಿಂದಾಗಿ ಬೇಧಿ ಆಗುವ ಸಾಧ್ಯತೆಗಳಿದ್ದು, ಇದಕ್ಕೆ ರೋಗ ನಿರೋಧಕ ಚುಚ್ಚುಮದ್ದು ನೀಡಿ ತಡೆಯಬಹುದು. ಅಮೀಬಿಯಾದಿಂದ ಬೇಧಿ ಆಗುವ ಸಂಭವ ಅತಿ ವಿರಳ ಕಾರಣದಿಂದ ಅನಾವಶ್ಯಕವಾಗಿ ಮಕ್ಕಳಿಗೆ ಅಮೀಬಿಯಾ ನಿರೋಧಕ ಔಷಧಿ ನೀಡುವ ಅಗತ್ಯತೆ ಇರುವುದಿಲ್ಲ ಎಂದು ಮಕ್ಕಳ ತಜ್ಞ ಡಾ. ಸುಧೀರ್ ಬೆಂಗಳೂರು ತಿಳಿಸಿದರು. ಭಾರತೀಯ ವೈದ್ಯಕೀಯ ಸಂಘದ ತಾಲೂಕು ಘಟಕ ವೈದ್ಯರುಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಮುಂದುವರೆದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಬೇಧಿಗೆ ಚಿಕಿತ್ಸೆ ನೀಡಬೇಕಾದಲ್ಲಿ ವೈದ್ಯರು ಎಚ್ಚರ ವಹಿಸುವುದು ಮುಖ್ಯ. ಸಾಮಾನ್ಯವಾಗಿ ಎಲ್ಲಾ ಬೇಧಿಯೂ ಸೋಂಕಿತವಾಗಿರುವುದಿಲ್ಲ ಮತ್ತು ಇವುಗಳಿಗೆ ಹೆಚ್ಚಿನ ಜೀವನಿರೋಧಕ ಔಷಧಿಗಳ ಅವಶ್ಯಕತೆ ಇರುವುದಿಲ್ಲ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಪಟ್ಟಣದ ಮಕ್ಕಳ ತಜ್ಞ ಡಾ.ಹೊನ್ನೇಗೌಡರನ್ನು ತಾಲೂಕು ಸಂಘದಿಂದ ಸನ್ಮಾನಿಸಲಾಯಿತು. ಹಾಸನದ ಮಣಿ ಸ್ಪೆಷಾಲಿಟಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ದಿನೇಶ್ ಕಬ್ಬಳಿಗೆರೆ, ಡಾ.ಜೆ.ಕೆ.ಯತೀಶ್, ಕೆ.ಆರ್.ನಗರದ ಹಿರಿಯ ವೈದ್ಯ ಡಾ.ಎನ್.ಡಿ.ಜಗನ್ನಾಥ್, ಡಾ.ಎಚ್.ಟಿ.ರವೀಂದ್ರ, ಡಾ.ಎನ್.ಶಿವಪ್ರಸಾದ್, ಡಾ.ಬಿ.ಎಸ್.ಮಹೇಶ್ರನ್ನು ಗೌರವಿಸಲಾಯಿತು. ಡಾ. ಕೆ.ಶ್ರೀನಿವಾಸಮೂರ್ತಿ ಸ್ವಾಗತಿಸಿದರು. ಡಾ.ಟಿ.ಎಸ್.ಲಕ್ಷ್ಮೀಕಾಂತ್ ವಂದಿಸಿದರು. ಡಾ.ಡಿ.ಎಸ್.ವಿಜಯಕುಮಾರ್ ನಿರೂಪಿಸಿದರು.
ಸತತ ಅಭ್ಯಾಸದಿಂದ ಕ್ರೀಡೆಯಲ್ಲಿ ಯಶಸ್ಸು ಸಾಧ್ಯ: ವಸಂತರಾಜೇ ಅರಸ್
ಜಾವಗಲ್: ಸತತ ಅಭ್ಯಾಸ ಮತ್ತು ಪರಿಶ್ರಮದಿಂದ ಕ್ರೀಡೆಯಲ್ಲಿ ಯಶಸ್ಸು ಸಾಧ್ಯವೆಂದು ಜಾವಗಲ್ ಸರ್ಕಾರಿ ಪಪೂ ಕಾಲೇಜು ಪ್ರಾಂಶುಪಾಲ ಎಸ್.ಎಸ್. ವಸಂತರಾಜೇ ಅರಸ್ ಹೇಳಿದರು. ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಬಾಲ್ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಮತ್ತು ವಿವಿಧ ಆಟೋಟಗಳಲ್ಲಿ ಜಯಗಳಿಸಿದ ವಿದ್ಯಾರ್ಥಿನಿಯರನ್ನು ಅಭಿನಂದಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಹೆಚ್ಚಿನ ಆಸಕ್ತಿ ವಹಿಸಬೇಕೆಂದರು. ಕಾಲೇಜಿನಲ್ಲಿ ದೈಹಿಕ ಶಿಕ್ಷಣ ತರಬೇತಿದಾರರು ಇಲ್ಲದಿದ್ದರೂ, ಉಪನ್ಯಾಸಕ ಮಂಜುನಾಥ್, ಉದಯಕುಮಾರ್ ಅವರ ಅವಿರತ ಶ್ರಮದಿಂದ ಈ ಸಾಧನೆ ಮಾಡಿದ್ದಾರೆ ಎಂದು ಹೇಳಿದರು. ಬಾಲ್ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದ ಅಮೃತ ಜೆ,ಡಿ, ಪವಿತ್ರ ಎಮ್.ಎಸ್. ಪ್ರೇಮ,ಎ,ವೈ, ತನುಶ್ರೀ, ರಚನಾ,ಎ,ಬಿ, ಧನಲಕ್ಷ್ಮಿ,ಎಸ್,ಕೆ, ದಿವ್ಯಾ,ಎಮ್,ಎಸ್, ಭಾರತಿಬಾಯಿ, 4-400 ರಿಲೇಯಲ್ಲಿ ದ್ವಿತೀಯ ಸ್ಥಾನ ಗಳಿಸಿದ ಲಾವಣ್ಯ, ದಿವ್ಯಾ, ರಂಜಿತಾ, ಭಾರತಿಬಾಯಿ, 3000ಮೀ ಓಟದಲ್ಲಿ ತೃತೀಯ ಸ್ಥಾನಗಳಿಸಿದ ಲಾವಣ್ಯ, 800ಮೀ ಓಟದಲ್ಲಿ ತೃತೀಯ ಸ್ಥಾನಗಳಿಸಿದ ರಂಜಿತಾ ಇವರುಗಳಿಗೆ ಪ್ರಶಸ್ತಿ ಪತ್ರ ಮತ್ತು ಪದಕಗಳನ್ನು ನೀಡಿ ಗೌರವಿಸಲಾಯಿತು. ಉಪನ್ಯಾಸಕ ಮಂಜುನಾಥ್, ಎನ್,ಉದಯಕುಮಾರ್, ಜಾವಗಲ್ ವಸಂತಕುಮಾರ್, ಜೆ.ಎಸ್. ರವಿಶಂಕರ್ ಮಾತನಾಡಿದರು. ಕಾಲೇಜಿನ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಇದ್ದರು.
8ನೇ ರ್ಯಾಂಕ್: ಜಾವಗಲ್ ಹೋಬಳಿ ಕರಗುಂದ ಕ್ಲಸ್ಟರ್ ಹಾರನಹಳ್ಳಿ ಸ.ಹಿ.ಪ್ರಾ.ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಿ.ಎನ್. ಶೀಲಾ ಅವರು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಎಂ.ಎ. ಸ್ನಾತಕೋತ್ತರ ಪದವಿ ಹಿಂದಿ ವಿಷಯದಲ್ಲಿ 8ನೇ ರ್ಯಾಂಕ್ ಪಡೆದಿದ್ದಾರೆ. ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ರ್ಯಾಂಕ್ ಪ್ರಮಾಣ ಪತ್ರನೀಡಿ ಗೌರವಿಸಿದೆ. ಮುಖ್ಯ ಶಿಕ್ಷಕರು ಅಭಿನಂದಿಸಿದ್ದಾರೆ.
ಹಕ್ಕಿನ ಬಗ್ಗೆ ಪರಿಶಿಷ್ಟರಿಗೆ ಅರಿವು ಮೂಡಿಸಬೇಕು: ನ್ಯಾ. ಸರಸ್ವತಿ
ಅರಸೀಕೆರೆ: ಸಂವಿಧಾನ ದತ್ತವಾಗಿರುವ ಸಮಾನತೆ ಹಕ್ಕಿನ ಬಗ್ಗೆ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕಾಗಿದೆ ಎಂದು ಸಮಾಜದಲ್ಲಿ ಹಿರಿಯ ನ್ಯಾಯಾಧೀಶೆ ಸರಸ್ವತಿ ವಿ.ಕೋಸಂದರ್ ತಿಳಿಸಿದರು. ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ ಆಶ್ರಯದಲ್ಲಿ ಪಟ್ಟಣದ ಬಾಲಕಿಯರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ವಿದ್ಯಾರ್ಥಿನಿಯರಿಗೆ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಅತಂಕದ ಸಂಗತಿಯಾಗಿದೆ ಎಂದು ವಿಷಾದಿಸಿದರು. ವಕೀಲರಾದ ಆರ್.ವಿಜಯಕುಮಾರ್ ಹಾಗೂ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಇಲಾಖೆ ವಿಸ್ತರಣಾಧಿಕಾರಿ ಕಾಶಿನಾಥ್ ಉಪನ್ಯಾಸ ನೀಡಿದರು. ಪ್ರಧಾನ ಸಿವಿಲ್ ನ್ಯಾಯಾಧೀಶ ದೇವಾನಂದ್, ಅಪರ ಸಿವಿಲ್ ನ್ಯಾಯಾಧೀಶ ಪ್ರಕಾಶ್ ಚನ್ನಪ್ಪ ಕುರುಬೆಟ್ ಮಾತನಾಡಿದರು. ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಸರ್ವೇಶ್, ಕಾರ್ಯದರ್ಶಿ ಓ.ಎ.ಶಿವಕುಮಾರ್, ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧಿಕಾರಿ ದಯಾನಂದ್ ಇದ್ದರು.
'ಗ್ರಾಮೀಣ ಜನರಿಗೆ ಕಳ್ಳಭಟ್ಟಿ, ಮದ್ಯದ ಬಗ್ಗೆ ಅರಿವು ಮೂಡಿಸುವುದು ಅಗತ್ಯ'
ಬೇಲೂರು: ಕೇವಲ ಅದಾಯವನ್ನೇ ಪರಿಗಣಿಸದೆ ಅಬಕಾರಿ ಇಲಾಖೆ ಸಾರ್ವಜನಿಕರ ಆರೋಗ್ಯದ ಬಗ್ಗೆ ಚಿಂತನೆ ನಡೆಸುವುದು ಅಗತ್ಯ ಎಂದು ಕಾನೂನು ಸೇವಾ ಸಮಿತಿ ಹಾಗೂ ಹಿರಿಯ ವ್ಯವಹಾರಿಕ ನ್ಯಾಯಧೀಶ ಈ.ರಾಜೇಗೌಡ ತಿಳಿಸಿದರು. ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಅಬಕಾರಿ ಇಲಾಖೆ ಆಶ್ರಯದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿ ಬಡತನ, ಮಹಿಳೆಯರ ಹಕ್ಕು, ಶಿಕ್ಷಣ,ಆರೋಗ್ಯ ಬಗ್ಗೆ ಚಿಂತನೆ ಮಾಡುವುದು ಅಗತ್ಯವಾಗಿದ್ದು ಗ್ರಾಮೀಣ ಪ್ರದೇಶದ ಜನರಿಗೆ ಕಳ್ಳಭಟ್ಟಿ ಹಾಗೂ ಮದ್ಯದ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು. ಮದ್ಯಪಾನ ಬಗ್ಗೆ ಗ್ರಾಮೀಣ ಭಾಗದಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದರು. ವಕೀಲರ ಸಂಘದ ಅಧ್ಯಕ್ಷ ಎಸ್.ಎನ್.ಲಿಂಗೇಶ್,ತಾಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಹಾಗೂ ನ್ಯಾ. ಶರ್ಮಿಳಾ ಸರ್ಕಾರಿ ಸಹಾಯಕ ಅಭಿಯೋಜಕ ಪ್ರಕಾಶ್ ಸುಂಕದ್, ಮೋತಿಲಾಲಚೌದರಿ, ವಕೀಲರ ಸಂಘದ ಉಪಾಧ್ಯಕ್ಷ ರಾಜೇಗೌಡ, ಅಬಕಾರಿ ಡಿವೈಎಸ್ಪಿ ಸುನೀಲ್, ಸಂತೋಷ್, ನೂರ್ಜಹಾನ್ ಇತರರು ಇದ್ದರು.