ಕಿಡ್ನಿ ವೈಫಲ್ಯ: ಬಾಲಕಿಗೆ ಆರ್ಥಿಕ ನೆರವು
ಚನ್ನರಾಯಪಟ್ಟಣ: ತಾಲೂಕಿನ ಗೂರನಹಳ್ಳಿ ಮಂಟಿಯ ಕೂಲಿ ಕಾಮಿಕ ನೇತ್ರಾವತಿ ರಂಗಸ್ವಾಮಿ ಎಂಬುವರ ಪುತ್ರಿ ಹಾಗೂ ಮೇಗಲಕೇರಿ ಸರ್ಕಾರಿ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಮೇಘನಾ 2 ವರ್ಷದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾಳೆ.ಈಕೆಯ ಆರೋಗ್ಯ ಸುಧಾರಣೆಗಾಗಿ ಮಾತೃಭೂಮಿ ವೃದ್ಧಾಶ್ರಮದಿಂದ 12 ಸಾವಿರ ರು. ಸಹಾಯಧನವನ್ನು ವೃದ್ಧಾಶ್ರಮ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯದರ್ಶಿ ವಿಕ್ರಮ್ ನೀಡಿದರು.
ಬಾಲಕಿಯ ಆರೋಗ್ಯ ಸುಧಾರಣೆಗೆ ಸಾರ್ವಜನಿಕರು ಧನ ಸಹಾಯ ಮಾಡುವ ಮೂಲಕ ಸಹಕರಿಸಬೇಕೆಂದು ಅವರು ಮನವಿ ಮಾಡಿದರು. ದಾನಿಗಳು ಚನ್ನರಾಯಪಟ್ಟಣದ ಸಿಂಡಿಕೇಟ್ ಬ್ಯಾಂಕ್ ಖಾತೆ ನಂ 14062210015231 ಇಲ್ಲಿಗೆ ಪಾವತಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ. 8453318359 ಅಥವಾ 9535585978 ಸಂಪರ್ಕಿಸಬಹುದು.