ಗೌರಮ್ಮ ದೇವಿ ವಿಸರ್ಜನಾ ಮಹೋತ್ಸವ
ಜಾವಗಲ್: ಸಮೀಪದ ಬಂದೂರು ಗ್ರಾಮದಲ್ಲಿ 21 ದಿನಗಳಿಂದ ಪ್ರತಿಷ್ಠಾಪಿಸಲಾಗಿದ್ದ ಶ್ರೀಗೌರಮ್ಮದೇವಿ ವಿಸರ್ಜನಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಗೌರಮ್ಮದೇವಿ ಹಾಗೂ ಗ್ರಾಮ ದೇವತೆಗಳಾದ ಕರಿಯಮ್ಮ, ದೊಡ್ಡಮ್ಮ, ಬೀರಲಿಂಗೇಶ್ವರಸ್ವಾಮಿ, ಮಲ್ಲಿಕಾರ್ಜುನಸ್ವಾಮಿ, ಹೊಸಳ್ಳಿ ಬೀರಲೀಂಗೇಶ್ವರ ಉತ್ಸವಮೂರ್ತಿಗಳನ್ನು ಪುಷ್ಪಾಲಂಕೃತ ವಾಹನಗಳಲ್ಲಿ ಶೃಂಗರಿಸಿ, ಡೊಳ್ಳು ಕುಣಿತ, ಕರಡೆವಾದ್ಯಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಸಂಜೆ ಗ್ರಾಮದ ಕೆರೆಯಲ್ಲಿ ವಿಸರ್ಜಿಸಲಾಯಿತು. ಸುತ್ತಮುತ್ತಲಿನ ಗ್ರಾಮಗಳಿಂದ ಸಹಸ್ರಾರು ಭಕ್ತರು ಆಗಮಿಸಿದ್ದರು. ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು.