ಬಾಲ ಕಾರ್ಮಿಕ ಮರಳಿ ಕುಟುಂಬಕ್ಕೆ ಒಪ್ಪಿಸಿದ ಸಂಘ
ಚನ್ನರಾಯಪಟ್ಟಣ: ಶ್ರೀ ವೀರಾಂಜನೇಯ ಯುವಕ ಸಂಘ ಹಾಗೂ ಸಿವಿಕೆಎಲ್ ಸ್ವಯಂ ಸೇವಾ ಸಂಸ್ಥೆಯಿಂದ ಬಾಲ ಕಾರ್ಮಿಕ ನಿರ್ಮೂಲನಾ ಅಂಗವಾಗಿ ಪಟ್ಟಣದ ಮೈಸೂರು ರಸ್ತೆಯ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ನವೀನ್ (12) ನನ್ನು ಬಾಲಕಾರ್ಮಿಕ ಕಾಯ್ದೆಯಡಿಯಲ್ಲಿ ಪಟ್ಟಣದ ಆರಕ್ಷಕ ಠಾಣೆಗೆ ದೂರು ನೀಡಿ ನಂತರ ಆ ಬಾಲ ಕಾರ್ಮಿಕನನ್ನು ಠಾಣೆಗೆ ಕರೆಸಲಾಯಿತು.
ಸ್ಥಳಕ್ಕೆ ಆಗಮಿಸಿದ ಕೆಂಪೇಗೌಡ ವೇದಿಕೆಯ ಅಧ್ಯಕ್ಷ ಆನಂದ್ ಕಾಳೇನಹಳ್ಳಿ ಮಧ್ಯ ಪ್ರವೇಶಿಸಿ ಬಾಲಕನ ಕುಟುಂಬದ ಪರಿಸ್ಥಿತಿ ವಿವರಿಸಿದರು. ಅದಕ್ಕೆ ಎಸ್ಐ ರಾಜು ಅವರು 15 ವರ್ಷ ಮೇಲ್ಟಟ್ಟ ಮಕ್ಕಳು ಕೆಲವು ನಿರ್ವಹಿಸಬೇಕು. ಕಾಯ್ದೆ ಪ್ರಕಾರ ಇದು ತಪ್ಪು. ಆದ ಕಾರಣ ಈ ಬಾಲ ಕಾರ್ಮಿಕನ್ನು ಕೂಡಲೆ ಶಾಲೆಗೆ ಸೇರಿಸುವಂತೆ ಕುಟುಂಬದವರಿಗೆ ತಿಳಿಸಿದರು.
ಬೇಕರಿ ಮಾಲೀಕನಿಗೆ 12 ವರ್ಷದ ಬಾಲಕನನ್ನು ಕೆಲಸಕ್ಕೆ ಸೇರಿಸಿಕೊಂಡಿರುವುದು ಬಾಲಾಪರಾಧವಾಗಿರುತ್ತದೆ ಮುಂದೆ ಬಾಲ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಕೊಳ್ಳಬಾರದು ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಜಯಕರ್ನಾಟಕ ಸಂಘದ ತಾಲೂಕು ಅಧ್ಯಕ್ಷ ಜಗದೀಶ್ ಚೌಡುವಳ್ಳಿ, ಎಎಸ್ಐ ರಂಗಶೆಟ್ಟಿ, ಸಂಘದ ಕಾರ್ಯದರ್ಶಿ ಲೋಹಿತ್, ನವೀನ್, ಲೋಕೇಶ್ ಉಪಸ್ಥಿತರಿದ್ದರು.