ಮಾತೃಭೂಮಿ ಉಚಿತ ವೃದ್ಧಾಶ್ರಮ ಉದ್ಘಾಟನೆ
ಚನ್ನರಾಯಪಟ್ಟಣ: ಮಾತೃಭೂಮಿ ಉಚಿತ ವೃದ್ಧಾಶ್ರಮದ ಉದ್ಘಾಟನಾ ಕಾರ್ಯಕ್ರಮ ಪಟ್ಟಣದ ಬಿಪಿಎಡ್ ಕಾಲೇಜು ಆವರಣದಲ್ಲಿ ನೊಣವಿನ ಕೆರೆ ಕಾಡುಸಿದ್ದೇಶ್ವರ ಮಠದ ಕರಿಬಸವ ದೇಶೀ ಕೇಂದ್ರ ಶಿವಯೋಗೇಶ್ವರ ಮಹಾಸ್ವಾಮೀಜಿ ಸಮ್ಮುಖದಲ್ಲಿ ನಡೆಯಿತು.
ಪರದೇಶಿ ರಾಮಯ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀಗಳು ಮಾತನಾಡಿ ಈಗಿನ ಕಾಲದಲ್ಲಿ ತಂದೆ ತಾಯಿಯನ್ನು ಸಾಕಲು ಹಿಂಜರಿಯುವಂತಹ ಮಕ್ಕಳಿದ್ದಾರೆ. ಅಂತಹ ತಾಯಿ ತಂದೆಯರು ಇಂತಹ ವೃದ್ಧಾದ್ಧಾಶ್ರಮಗಳಿಗೆ ಬಂದು ತಮ್ಮ ಜೀವನವನ್ನು ಕಳೆಯುತ್ತಾರೆ ಎಂದು ಹೇಳಿದರು.
ನುಗ್ಗೇಹಳ್ಳಿ ಹಿರೇಮಠದ ಮಹೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ, ಕತ್ರಿಘಟ್ಟ ಮೆಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ ಗುರೂಜಿ, ಸಕಲೇಶ್ವರ ಆಶ್ರಮದ ಜಯಾನಮದಯೋಗಿ ಸ್ವಾಮೀಜಿ, ವಿಠಲದಾಸರು, ಜಿಪಂ ಅಧ್ಯಕ್ಷೆ ಅಂಬಿಕಾ ರಾಮಕೃಷ್ಣ, ತಾಲೂಕು ಕಸಾಪ ಅಧ್ಯಕ್ಷ ಲೋಕೇಶ್, ನೌಕರರ ಸಂಘದ ತಾಲೂಕು ಅಧ್ಯಕ್ಷ ಮೋಹನ್ಕುಮಾರ್, ವಂದೇಮಾತರಂ ಸೇವಾ ಟ್ರಸ್ಟ್ ಅಧ್ಯಕ್ಷೆ ವಿಜಯ ನಾಗಣ್ಣ, ಜೈಹಿಂದ್ ಮಾತೃಭೂಮಿ ವೃದ್ಧಾಶ್ರಮದ ಕಾರ್ಯದರ್ಶಿ ವಿಕ್ರಮ್, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾನಿಲಯ ಮೋಹನ ಕುಮಾರಿ, ತಾಪಂ ಅಧ್ಯಕ್ಷೆ ಹೇಮಾವತಿ, ವಂದೇ ಮಾತರಂ ಅಧ್ಯಕ್ಷೆ ಕೃಪಾ, ಕಮಲಮ್ಮ, ವಂದೇ ಮಾತರಂ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಇತರರು ಇದ್ದರು. ಇದೇ ವೇಳೆ ಕುಮಾರಿ ದೀಕ್ಷಾಳಿಂದ ಅಮೋಘ ಭರತನಾಟ್ಯ ಕಾರ್ಯಕ್ರಮ ನಡೆಯಿತು.