ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಾಸೇ ಯೋಜನೆ ದಿನಾಚರಣೆ

Rashmi Kasaragodu
Updated On : 4 Oct 2013, 12:48 pm

ಉದಯಪುರ (ಚನ್ನರಾಯಪಟ್ಟಣ ತಾ.): ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ನಡೆಯಿತು. ಎನ್ಎಸ್ಎಸ್ ಅಧಿಕಾರಿ  ಪ್ರೊ. ಸಿ.ಎಲ್. ಶಿವಕುಮಾರ್ ಮಾತನಾಡಿ, ರಾ.ಸೇ.ಯೋ ಧ್ಯೇಯೋದ್ದೇಶ ಬಗ್ಗೆ ತಿಳಿಸಿದರು. ಅಲ್ಲದೆ ಎನ್ಎಸ್ ಎಸ್ನಲ್ಲಿ ಅನುಭವಿಕ ಶಿಕ್ಷಣ ಪಡೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಪ್ರಭಾರ ಪ್ರಾಂಶುಪಾಲ  ಪ್ರೊ.ಬಿ.ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸಿದ್ದು, ವಿದ್ಯಾರ್ಥಿಗಳು ಗಾಂಧೀಜಿ ತತ್ವ ಆದರ್ಶಗಳನ್ನು ಬೆಳಸಿಕೊಳ್ಳಬೇಕು ಎಂದು ತಿಳಿಸಿದರು. ವಿದ್ಯಾರ್ಥಿ ಪುಟ್ಟರಾಜು ಮತ್ತು ತಂಡದವರು ಪ್ರಾರ್ಥಿಸಿದರು. ಉಪನ್ಯಾಸಕ ಹೇಮೇಗೌಡ ವಂದಿಸಿದರು. ಸಹಾಯಕ ಪ್ರಾಧ್ಯಾಪಕ ಪ್ರೊ. ಹನುಮಂತಯ್ಯ, ಗಂಗಾಧರಯ್ಯ, ನಾಗರಾಜ್,     ವೆಂಕಟೇಶಗೌಡ, ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್ಕುಮಾರ್, ಉಪನ್ಯಾಸಕರಾದ ಧನಲಕ್ಷ್ಮಿ, ದಿವ್ಯಶ್ರೀ ಹಾಗೂ ಬೋಧಕೇತರ ವರ್ಗದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement