ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಿಭಾಗ ಮಟ್ಟಕ್ಕೆ ವಾಸವಿ ವಾಲಿಬಾಲ್ ತಂಡ

Rashmi Kasaragodu
Updated On : 4 Oct 2013, 12:49 pm

ಕನ್ನಡಪ್ರಭ ವಾರ್ತೆ೤ ಹಾಸನ೤ ಅ.3
ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಪ್ರಾಥಮಿಕ ಶಾಲೆಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಹಾಸನದ ವಾಸವಿ ಆಂಗ್ಲಮಾಧ್ಯಮ ಶಾಲೆ ವಿದ್ಯಾರ್ಥಿಗಳು ಅರಸೀಕೆರೆ ತಾಲೂಕು ತಂಡವನ್ನು 25-15, 25-13 ಅಂಕಗಳ ಎರಡು ನೇರ ಸೆಟ್ಗಳಲ್ಲಿ ಮಣಿಸುವುದರೊಂದಿಗೆ ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿ ಮೈಸೂರು ವಿಭಾಗ ಮಟ್ಟದಲ್ಲಿ ಹಾಸನ ಜಿಲ್ಲೆಯನ್ನು ಪ್ರತಿನಿಧಿಸುವ ಗೌರವ ಪಡೆದಿದ್ದಾರೆ.
ಕ್ಲಸ್ಟರ್ ಸಂಯುಕ್ತ ವೃತ್ತ: ತಾಲೂಕು ಮಟ್ಟದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟದಲ್ಲೂ ವಿಜೇತ ಈ ತಂಡದ ಆರು ಮತ್ತು ಏಳನೇ ತರಗತಿಯ ಸ್ವಾತಿ, ನಿಕಿತಾ, ಎಚ್.ಎಸ್. ಸಿಂಧು, ಕವನ, ಆಶಿಕ, ತೇಜಸ್ವಿನಿ ಕೆ.ಎನ್. ಪ್ರಕೃತಿ,  ನಿಶ್ಚಿತಾ, ಐಶ್ವರ್ಯ, ಅಮೂಲ್ಯ, ಮತ್ತು  ಅನೂಷಾ ಅಕ್ಟೋಬರ್ 7 ಮತ್ತು 8ರಂದು ಚಿಕ್ಕಮಗಳೂರಿನಲ್ಲಿ ನಡೆಯುವ ವಿಭಾಗಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.   
ಈ ಕ್ರೀಡಾಕೂಟದಲ್ಲೂ ವಿಜೇತರಾಗಿ ರಾಜ್ಯಮಟ್ಟದಲ್ಲೂ ಜಿಲ್ಲೆಯನ್ನು ಪ್ರತಿನಿಧಿಸುವಂತಾಗಲಿ ಎಂದು ಆಶಿಸಿ, ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕ ಜಯಶಂಕರ್, ಸಹಕರಿಸಿದ ಮನೋಹರ್ ಅವರನ್ನು ವಾಸವಿ ವಿದ್ಯಾ ಕೇಂದ್ರ ಟ್ರಸ್ಟ್ ಅಧ್ಯಕ್ಷ  ಆರ್. ರಾಜಗೋಪಾಲಶ್ರೇಷ್ಠಿ, ಮುಖ್ಯ ಅಧ್ಯಾಪಕಿ ಶೀಲಾ ಮತ್ತು ಸಿಬ್ಬಂದಿ ವರ್ಗ ಆಶಿಸಿ ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement