ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ
ಚನ್ನರಾಯಪಟ್ಟಣ: ಸ್ವಾಮಿ ವಿವೇಕಾನಂದರ ವಿಚಾರಗಳು ವಿದ್ಯಾರ್ಥಿಗಳಿಗೆ ಚೈತನ್ಯ ತುಂಬುತ್ತವೆ ಎಂದು ಹಾಸನದ ವಾಗ್ಮಿ ಚಿಂತಕ ಹರಿಹರಪುರದ ಶ್ರೀಧರ್ ಹೇಳಿದರು. ಪಟ್ಟಣದ ಶಿವಜ್ಯೋತಿ ಕಲ್ಯಾಣ ಮಂಟಪದಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ ಹಾಗೂ ಯುವ ಸಮಾವೇಶ ಉದ್ಘಾಟಿಸಿ ಮಾತನಾಡಿ, ಭಾರತದ ದೇಶ ಸಂಸ್ಕೃತಿಯನ್ನು ಸಾರುವಲ್ಲಿ ವಿಶ್ವಗುರು ಆಗಿತ್ತು. ಇದೀಗ ಬದಲಾದ ಸನ್ನಿವೇಶದಲ್ಲಿ ಸ್ವಾಮಿ ವಿವೇಕಾನಂದರ ಆದರ್ಶ ಚಿಂತನೆಗಳನ್ನು ಯುವ ಜನಾಂಗಕ್ಕೆ ತಿಳಿಸಿಕೊಡಬೇಕಾಗಿದೆ ಎಂದರು. ಶಿವಾಜಿ, ಆದಿಶಂಕರಚಾರ್ಯ, ಡಾ. ಬಿ. ಆರ್. ಅಂಬೇಡ್ಕರ್ ಸೇರಿದಂತೆ ಎಲ್ಲಾ ಮಹಾತ್ಮರನ್ನು ಸ್ವಾಮಿ ವಿವೇಕಾನಂದರಲ್ಲೇ ಕಾಣಬಹುದು ಎಂದು ಹೇಳಿದರು. ಆದಿಚುಂಚನಗಿರಿ ಪದವಿ ಕಾಲೇಜಿನ ಉಪನ್ಯಾಸಕ ನಾಗಣ್ಣ ಅಧ್ಯಕ್ಷತೆ ವಹಿಸಿದ್ದರು. ಸಂಘದ ಸಂಚಾಲಕ ಡಾ. ಸಿ.ಎಸ್. ಶೇಷಶಯನ, ಆನಂದ್, ಕೃಷ್ಣಮೂರ್ತಿ, ಬಿ.ಟಿ. ರಘು ಇದ್ದರು.