ಅಪಾರ ಪ್ರಾಕೃತಿಕ ಸಂಪತ್ತು ನಮ್ಮಲ್ಲಿದೆ: ಸಾಹಿತಿ ರಾಮಸ್ವಾಮಿ
ಅರಸೀಕೆರೆ: ಜಗತ್ತಿನ ಯಾವುದೇ ದೇಶ ಹೊಂದಿರದಷ್ಟು ಅಮೂಲ್ಯವಾದ ಪ್ರಾಕೃತಿಕ ಸಂಪತ್ತು ಹಾಗೂ ಜ್ಞಾನ ಸಂಪತ್ತನ್ನು ಭಾರತ ಹೊಂದಿದೆ ಎಂದು ಸಾಹಿತಿ ಡಿ.ಎಸ್.ರಾಮಸ್ವಾಮಿ ಹೇಳಿದರು.
ಅನಂತ ಸದ್ವಿದ್ಯಾ ಬಿಎಡ್ ಕಾಲೇಜು ವತಿಯಿಂದ ತಾಲೂಕಿನ ಬಾಣಾವರ ಹೋಬಳಿಯ ಕ್ಷೇತ್ರ ಗವಿಮಠದಲ್ಲಿ ಏರ್ಪಡಿಸಿದ್ದ ಸಮುದಾಯ ವಾಸ್ತವ್ಯ ಶಿಬಿರದಲ್ಲಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಆರ್. ಅನಂತಕುಮಾರ್ ಮಾತನಾಡಿದರು. ಸರ್ಕಾರಿ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ದೊರೇಶ್, ಪ್ರಾಂಶುಪಾಲ ಕಾಳೇಗೌಡ ಮಾತನಾಡಿದರು. ಲೋಕೇಶ್, ಹರೀಶ್, ಮಂಜುನಾಥ್, ಸತೀಶ್, ಅನಿತಾರಾಜ್, ಲತಾ ಪಾಟೀಲ್, ಸಿಬ್ಬಂದಿ ಇದ್ದರು.