ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕೆ. ಮಲ್ಲೇನಹಳ್ಳಿಯಲ್ಲಿ ವನ ಮಹೋತ್ಸವ

Rashmi Kasaragodu
Updated On : 5 Oct 2013, 12:00 pm

ಚನ್ನರಾಯಪಟ್ಟಣ: ತಾಲೂಕಿನ ಕೆ. ಮಲ್ಲೇನಹಳ್ಳಿ ಗ್ರಾಮದಲ್ಲಿ ಕೃಷಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ವನ ಮಹೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷಿ ಕಾಲೇಜಿನ ಮುಖ್ಯಸ್ಥ ಡಾ. ಎಲ್. ಮಂಜುನಾಥ್ ವಹಿಸಿದ್ದರು. ಅರಣ್ಯಶಾಸ್ತ್ರ ವಿಭಾಗದ ಡಾ. ವೆಂಕಯ್ಯ ಕೃಷಿ ವಿಸ್ತರಣಾ ವಿಭಾಗದ ಡಾ. ರಘುಪತಿ, ಬೀಜ ವಿಜ್ಞಾನ ವಿಭಾಗದ ಬಿ. ಬಸವರಾಜು, ಬೇಸಾಯ ಶಾಸ್ತ್ರ ವಿಭಾಗದ  ಮಂಜುನಾಥ್, ದೈಹಿಕ ಶಿಕ್ಷಣ ಶಿಕ್ಷಕ ಡಾ. ಪ್ರಸಾದ್ ರೆಡ್ಡಿ ಇದ್ದರು.
ಕಾಲೇಜಿನ ವತಿಯಿಂದ ಅರಣ್ಯ ಇಲಾಖೆಯ ಜಂಟಿ ಸಹಾಯದಿಂದ ಉಚಿತವಾಗಿ ರೈತರಿಗೆ ಸಸ್ಯ ವಿತರಿಸಲಾಯಿತು. ಎಲ್ಲಾ ಅತಿಥಿಗಳು, ರೈತರು ಹಾಗೂ ಶಿಬಿರಾರ್ಥಿಗಳು ಒಟ್ಟಾಗಿ ಸೇರಿ ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement