ಗಾಂಧಿ, ಶಾಸ್ತ್ರಿ ಜನ್ಮ ದಿನಾಚರಣೆ
ಅರಸೀಕೆರೆ: ಮಹಾತ್ಮ ಗಾಂಧಿ ಅವರ 145ನೇ ಜನ್ಮ ದಿನಾಚರಣೆಯನ್ನು ತಾಲೂಕು ಆಡಳಿತದ ವತಿಯಿಂದ ಇತ್ತೀಚೆಗೆ ಮಿನಿ ವಿಧಾನಸೌಧದ ಆವರಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ತಾಲೂಕು ಕಚೇರಿಯ ಎಲ್ಲ ಸಿಬ್ಬಂದಿ, ತಹಸೀಲ್ದಾರ್ ಕೇಶವಮೂರ್ತಿ ನೇತೃತ್ವದಲ್ಲಿ ಸಂಭ್ರಮದಿಂದ ಭಾಗವಹಿಸಿ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿದರು. ಕೆಂಗಲ್ ಬಸವೇಶ್ವರ ಭಜನಾ ಮಂಡಳಿ ಅವರಿಂದ ಭಜನೆಯನ್ನು ಏರ್ಪಡಿಸಲಾಗಿತ್ತು. ಸುನಿತಾ ಅಶೋಕ್, ಜಾನಕಿ ರಾಮಶೆಟ್ಟಿ, ಪ್ರಭಾ ರಾಮಚಂದ್ರಶೆಟ್ಟಿ, ವೇದಘೋಷ ಮಾಡಿ ಭಗವದ್ಗೀತೆ ಪಠಣ ಮಾಡಿದರು.ಜಾಮೀಯ ಮಸೀದಿಯ ಧರ್ಮಗುರು ಮೌಲನಾ ಮಹಮ್ಮದ್ ನಾಜೀಮ್ ರಾಜಾ ಹಾಗೂ ಪಾದ್ರಿ ಜೋಸೆಫ್ ಗಾಂಧೀಜಿಯವರು ಸ್ವಾತಂತ್ರ್ಯಕ್ಕಾಗಿ ನಡೆಸಿದ ಶಾಂತಿಯುತ ಹೋರಾಟ ಹಾಗೂ ಅವರ ತತ್ವ, ಆದರ್ಶಗಳ ಬಗ್ಗೆ ಮಾತನಾಡಿದರು.