ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಗಾಂಧೀಜಿ ಸತ್ಯ, ಅಹಿಂಸೆ ಗುಣ ಸರ್ವಕಾಲಿಕ'

Rashmi Kasaragodu
Updated On : 5 Oct 2013, 12:09 pm

ಜಾವಗಲ್: ಗಾಂಧೀಜಿಯವರ ಶಾಂತಿ, ಸತ್ಯ, ಅಹಿಂಸೆ, ಗುಣಗಳು ಸಾರ್ವಕಾಲಿಕವಾಗಿ ಆಧರಣೀಯವಾಗಿವೆ ಎಂದು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಭಾಷಾ ತಿಳಿಸಿದರು. ಗಾಂಧೀಜಿಯವರ 145 ನೇ  ಮತ್ತು ಲಾಲ್ಬಹದ್ದೂರ್ಶಾಸ್ತ್ರಿಯವರ 109ನೇ ಜನ್ಮ ದಿನೋತ್ಸವದಲ್ಲಿ ಮಾತನಾಡಿ ಪ್ರಸ್ತುತ ಸಮಾಜದಲ್ಲಿ ಅಶಾಂತಿ ತಲೆದೋರಿದ್ದು ಕೊಲೆ, ಸುಲಿಗೆ, ಅತ್ಯಾಚಾರಗಳಿಂದ ನಾಗರೀಕರು ತಲೆತಗ್ಗಿಸುವಂತಹ ವಾತಾವರಣ ನಿರ್ಮಾಣವಾಗಿದೆ ಎಂದು ವಿಷಾದಿಸಿದರು.
ಸಹಪ್ರಾಧ್ಯಾಪಕ ಶಂಕರಲಿಂಗೇಗೌಡ, ಶಿವಕುಮಾರ್ ಮಾತನಾಡಿದರು. ವಿದ್ಯಾರ್ಥಿಗಳು ಶ್ರಮದಾನ ನಡೆಸಿ ಕಾಲೇಜಿನ ಆವರಣ ಸ್ವಚ್ಛಗೊಳಿಸಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ  ನಡೆದ ಸಮಾರಂಭದಲ್ಲಿ ಪ್ರಾಂಶುಪಾಲ ವಸಂತರಾಜ್ಅರಸ್ ಮಾತನಾಡಿ, ಗಾಂಧೀಜಿ ಮತ್ತು ಶಾಸ್ತ್ರಿ ದೇಶಕಂಡ ಮಹಾನ್ ಚೇತನ. ವಿದ್ಯಾರ್ಥಿಗಳು ದೇಶಾಭಿಮಾನ ಬೆಳಸಿಕೊಳ್ಳಬೇಕೆಂದರು. ಉಪ ಪ್ರಾಂಶುಪಾಲ ಯೋಗೀಶ್, ಉಪನ್ಯಾಸಕ ಮಂಜುನಾಥ್, ಶಿವಲಿಂಗಯ್ಯ, ಚಂದ್ರೇಗೌಡ, ಮರುಳಸಿದ್ದಪ್ಪ, ಪುಟ್ಟಶಂಕರಪ್ಪ ಮಾತನಾಡಿದರು. ಅಧ್ಯಾಪಕ ವರ್ಗದವರು ಇದ್ದರು.
ಮಕ್ಕಳ ಮನೆ ಮತ್ತು ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ಸರಳವಾಗಿ ಗಾಂಧೀಜಯಂತಿ ಆಚರಿಸಲಾಯಿತು. ಗಾಂಧೀಜಿ ಮತ್ತು ಶಾಸ್ತ್ರಿಯವರ ಭಾವಚಿತ್ರಗಳಿಗೆ ಎಸ್ಡಿಎಂಸಿ ಅಧ್ಯಕ್ಷ ಶ್ರೀನಿವಾಸ್ ಹಾಗೂ ಶಿಕ್ಷಕರು ಪೂಜೆ ಸಲ್ಲಿಸಿದರು. ಹಿರಿಯ ಶಿಕ್ಷಕ ದಾನೇಗೌಡ ಸಾಮೂಹಿಕವಾಗಿ ಸರ್ವಧರ್ಮ ಪ್ರಾರ್ಥನೆ ನಡೆಸಿಕೊಟ್ಟರು. ಮುಖ್ಯ ಶಿಕ್ಷಕ ಶಿವಣ್ಣ, ಶಿಕ್ಷಕ ಕೆ,ಎಸ್.ಸುರೇಶ್, ಸರಸ್ವತಿ ಮಾತನಾಡಿದರು. ಗ್ರಾಪಂ ನಾಡಕಚೇರಿ ಸೇರಿದಂತೆ ನಾನಾ ಸರ್ಕಾರಿ ಕಚೇರಿಗಳು, ಮಾಡೆಲ್ಶಾಲೆ, ಕನ್ನಡಮಾತಾ, ಉರ್ದು, ಶ್ರೀನಿಧಿ, ಇಂದಿರಾಸ್ಮಾರಕ, ಎಸ್.ಕೆ.ಪ್ರಾಥಮಿಕ ಶಾಲೆಗಳು, ಡಾ. ಅಂಬೇಡ್ಕರ್ ಪ್ರೌಢಶಾಲೆ ಸೇರಿದಂತೆ ನಾನಾ ಶಾಲೆಗಳಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement