ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನೂತನ ರೇಲ್ವೆ ಗೇಟ್ ಅಳವಡಿಸಲು ಮನವಿ

Rashmi Kasaragodu
Updated On : 4 Oct 2013, 11:58 am

ಹೊಳೆನರಸೀಪುರ: ಹಾಸನದಿಂದ ಪಟ್ಟಣದ ಮೂಲಕ ಮೈಸೂರು ಕಡೆಗೆ ಹಾದುಹೋಗುವ ರೈಲು ಮಾರ್ಗದಲ್ಲಿ ಇಲ್ಲಿನ ಅಂಬೇಡ್ಕರ್ ನಗರದ ಸಮೀಪದಲ್ಲಿ ನಾಗರಿಕರಿಗೆ ಅನುಕೂಲಕರವಾಗಿ ನೂತನ ರೇಲ್ವೆ ಗೇಟನ್ನು ಅಳವಡಿಸುವಂತೆ ಒತ್ತಾಯಿಸಿ ಅಂಬೇಡ್ಕರ್ ನಗರದ ನಿವಾಸಿಗಳು ಕಾಂಗ್ರೆಸ್ ಮುಖಂಡ ಎಚ್.ಆರ್.ನಾರಾಯಣ್ ನೇತೃತ್ವದಲ್ಲಿ ಇಲ್ಲಿನ ರೇಲ್ವೆ ಇಲಾಖೆಯ ಅಧಿಕಾರಿಗಳ ಮೂಲಕ ಮೈಸೂರು ರೇಲ್ವೆ ವಿಭಾಗೀಯ ಅಧಿಕಾರಿಗಳಿಗೆ ಇತ್ತೀಚೆಗೆ ಮನವಿ ಪತ್ರ ಸಲ್ಲಿಸಿದರು.
ಮೈಸೂರು ಕಡೆಗೆ ತೆರಳುವ ರೈಲು ಮಾರ್ಗದಲ್ಲಿ ಪಟ್ಟಣದ ಅಂಬೇಡ್ಕರ್ ನಗರದ ಸಮೀಪದಲ್ಲಿ ದಿನನಿತ್ಯವೂ ನೂರಾರು ಜನರು ಕೃಷಿ ಕಾರ್ಯಗಳಿಗೆ ತಮ್ಮ ಜಮೀನಿಗೆ ತೆರಳಲು, ಮಕ್ಕಳು ಶಾಲೆಗೆ ತೆರಳಲು ಹಾಗೂ ಇಲ್ಲಿನ ನಿವಾಸಿಗಳು ಮರಣ ಹೊಂದಿದಾಗ ಶವಸಂಸ್ಕಾರಕ್ಕೆ ಮಸಣಕ್ಕೆ ತೆರಳಲು ಸಾಗುವ ದಾರಿಗೆ ಅಡ್ಡವಾಗಿರುವ ರೈಲು ಮಾರ್ಗದ ವ್ಯಾಪ್ತಿಯಲ್ಲಿ ನೂತನವಾಗಿ ರೇಲ್ವೆ ಗೇಟನ್ನು ಅಳವಡಿಸಿಕೊಡುವಂತೆ ರೇಲ್ವೆ ಅಧಿಕಾರಿಗಳನ್ನು ಒತ್ತಾಯಿಸಿ ಬುಧವಾರ ಮನವಿ ನೀಡಿದರು.
ಅಲ್ಲದೇ ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸಿಕೊಡದಿದ್ದಲ್ಲಿ ಇಲ್ಲಿನ ಅಂಬೇಡ್ಕರ್ ನಗರದ ನೂರಾರು ನಿವಾಸಿಗಳೊಂದಿಗೆ ರೈಲು ನಿಲ್ದಾಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement