ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಭಾರತ ಎಲ್ಲ ಸಂಸ್ಕೃತಿಯ ನೆಲೆವೀಡು'

Rashmi Kasaragodu
Updated On : 5 Oct 2013, 12:09 pm

ಹಾರನಹಳ್ಳಿ: ಭಾರತ ದೇಶ ಎಲ್ಲಾ ಸಂಸ್ಕೃತಿ ನೆಲೆಬೀಡು, ಉಪನಿಷತ್ನಲ್ಲಿ ಹೇಳಿರುವಂತೆ ತಂದೆ ತಾಯಿ, ಗುರು ಹಿರಿಯರಿಗೆ ಗೌರವ ಕೊಡುವುದು ಭಾರತೀಯ ಸಂಸ್ಕೃತಿ ಎಂದು ಮೈಸೂರು ಹಿನಕಲ್ ವಿರಿಜಾನಂದ ಗುರೂಜಿ ತಿಳಿಸಿದರು. ಹಾರನಹಳ್ಳಿ ಗುರುಭಕ್ತರ ಮನೆ ಮನೆಗೆ ಭೇಟಿ ನೀಡಿ ಸತ್ಸಂಗ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಅವರು, ಗುರುವೇ ದೇವರು. ಗುರುವೇ ಪರಮಾಗತಿ, ಗುರುವೇ ಆಶ್ರಯ, ಸಂಸಾರದ ಕತ್ತಲೆಯಲ್ಲಿ ದಾರಿ ತಪ್ಪಿ ಕಷ್ಟಪಡುವವನಿಗೆ ಸದುಪದೇಶ ಮಾಡಿ ದಾರಿ ತೋರಿಸಿ ದು-ಖ ಮತ್ತು ಸುಖಗಳಿಗೆ ಮಾರ್ಗೋಪದೇಶಕನೇ ಗುರು ಎಂದು ಹೇಳಿದರು. ಗುರುವಿನ ಸ್ಮರಣೆ, ಗುರುವಂದನೆ, ಗುರುಭಕ್ತಿಯನ್ನು ಬೆಳೆಸಿಕೊಂಡು ಆ ಗುರುಭಕ್ತಿಯಿಂದಲೇ ಸಕಲ ಪುರುಷಾರ್ಥ ಪ್ರಾಪ್ತಿ ಶತಸಿದ್ಧವೆಂದರು. ಅಶ್ವಿನಿ ನಾಗೇಂದ್ರ ದಂಪತಿ  ಗುರುಗಳಿಗೆ ಪಾದಪೂಜೆ ನೆರವೇರಿಸಿದರು. ಎಚ್.ಆರ್.ಮುರುಳಿ, ನಾಗರಾಜ್, ರಘು, ಹಾಗೂ ಹಾರನಹಳ್ಳಿ ಬ್ರಾಹ್ಮಣ ಸಮಾಜದ ಪದಾಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement