ಅಂತಾರಾಜ್ಯ ಡಕಾಯಿತರ ಬಂಧನ
ಕನ್ನಡಪ್ರಭ ವಾರ್ತೆ ಸಕಲೇಶಪುರ ಅ. 5
ತಾಲೂಕಿನ ವಿವಿಧ ಕಡೆಗಳಲ್ಲಿ ಕಳ್ಳತನ ನಡೆಸಿದ್ದ ಅಂತರ ರಾಜ್ಯ ಡಕಾಯಿತರನ್ನು ಪಟ್ಟಣ ಪೊಲೀಸರು ಬಂಧಿಸಿ 8 ಅವರಿಂದ ಲಕ್ಷ ರು. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಚನ್ನರಾಯಪಟ್ಟಣ ತಾಲೂಕಿನ ಬೀಡಿಗನವಿಲೆ ಗ್ರಾಮದ ಮಧು, ಕೆ.ಆರ್. ಪೇಟೆ ತಾಲೂಕಿನ ಚಿಕ್ಕಮಂದಗೆರೆ ಗ್ರಾಮದ ನಾಗರಾಜ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನೇನಹಳ್ಳಿಯ ರವಿ, ಚನ್ನರಾಯಪಟ್ಟಣ ತಾಲೂಕಿನ ಚಿಕ್ಕಗೊಂಡನಹಳ್ಳಿಯ ಕೃಷ್ಣೇಗೌಡ, ಹೊಳೆನರಸಿಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದ ಜಯರಾಮು ಅವರನ್ನು ಬಂಧಿಸಿದ್ದು, ಒಂದು ಮಾರುತಿ ಆಲ್ಟೋ ಕಾರು, ಒಂದು ಹೀರೋ ಹೊಂಡ ಬೈಕ್, ಒಂದು ಅಪಾಚಿ ಬೈಕ್, ಒಂದು ಬೆಳ್ಳಿ ಲೇಪಿತ ಶಂಖ, ಚಿನ್ನದ ಬ್ರಾಸ್ಲೆಟ್, ಒಂದು ಜೊತೆ ಚಿನ್ನದ ಬಳೆಗಳು ಹಾಗೂ 144 ಗ್ರಾಂ ತೂಕದ ಮೂರು ಚಿನ್ನದ ಸರಗಳು ಸೇರಿದಂತೆ ಒಟ್ಟು 8 ಲಕ್ಷ ರು.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪಟ್ಟಣ ಪಟ್ಟಣ ಠಾಣೆ ಪಿಎಸ್ಐ ಜೀವನ್ ನೇತೃತ್ವದಲ್ಲಿ ಕಾರ್ಯಾಚರಣೆ ಯಶಸ್ವಿಯಾಗಿ ನಡೆಘಿಯಿತು.