'ಕಾನೂನಿನಿಂದ ಭ್ರಷ್ಟಾಚಾರ ತೊಡೆಯಲು ಆಗದು'
ಹಾಸನ: ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಕೇವಲ ಕಾನೂನು ಜಾರಿಗೊಳಿಸಿದರೆ ಸಾಲದು. ಭ್ರಷ್ಟಾಚಾರ ನಿರ್ಮೂಲನೆಗೆ ಇಡೀ ದೇಶದ ಜನತೆ ಪಣ ತೊಟ್ಟರೆ ಮಾತ್ರ ಸಾಧ್ಯ ಎಂದು ಎಂ.ಕೃಷ್ಣ ಕಾನೂನು ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಪ್ರೊ. ವಿ.ಶ್ರೀನಿವಾಸ್ ಹೇಳಿದರು.
ತಾಲೂಕಿನ ಮಾವಿನಹಳ್ಳಿಯಲ್ಲಿ ಹಾಸನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವತಿಯಿಂದ ಏರ್ಪಡಿಸಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ಭ್ರಷ್ಟಾಚಾರ ಮತ್ತು ಕಾನೂನು ವಿಷಯ ಕುರಿತು ಉಪನ್ಯಾಸ ನೀಡಿದರು.
ಎಚ್.ಎಸ್. ವೆಂಕಟೇಶ್ ಮಾಹಿತಿ ಹಕ್ಕಿನ ಕುರಿತು, ಸಹ್ನಿಷಾ ಲೋಕಾಯುಕ್ತ ಕುರಿತು ಉಪನ್ಯಾಸ ನೀಡಿದ ರು. ಎಸ್ಎಫ್ಐ ಜಿಲ್ಲಾಧ್ಯಕ್ಷ ಎಂ.ಜಿ.ಪೃಥ್ವಿ, ಎನ್ಎಸ್ಎಸ್ ಅಧಿಕಾರಿ ಎಂ.ಪಿ. ಮೋಹನ್, ಆಂಗ್ಲ ಉಪನ್ಯಾಸಕ ಗಣೇಶ ಭಟ್ ಇದ್ದರು. ಎಂ.ಕೃಷ್ಣ ಕಾನೂನು ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳಾದ ಕೆ.ಸಿ.ಚಂದ್ರಶೇಖರ್ ತಂಡದವರಿಂದ ಜಾನಪದ ಗೀತೆ, ಭಾವಗೀತೆ ಕಾರ್ಯಕ್ರಮ ನಡೆಯಿತು.