ಕಾನ್ವೆಂಟ್ ವ್ಯಾಮೋಹ: ಗ್ರಾಮೀಣ ಸರ್ಕಾರಿ ಶಾಲೆಗಳ ಬಂದ್
ಹಾರನಹಳ್ಳಿ: ಇಲ್ಲಿನ ಪ್ರಾಥಮಿಕ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಮಕ್ಷಮ ಕಾರ್ಯಕ್ರಮ ಈಚೆಗೆ ನಡೆಯಿತು.
ರೈತ ಸಂಘದ ಜಿಲ್ಲಾ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕಾನ್ವೆಂಟ್ ವ್ಯಾಮೋಹದಿಂದ ಸರ್ಕಾರಿ ಶಾಲೆಗಳು ಮುಚ್ಚುವ ಪರಿಸ್ಥಿತಿ ಉದ್ಭವಿಸಿದೆ. ಸರ್ಕಾರದಿಂದ ಶಾಲಾಭಿವೃದ್ಧಿಗೆ ಲಕ್ಷಾಂತರ ರು. ಬಿಡುಗಡೆಯಾಗುತ್ತಿದೆ ಹಾಗೂ ಉತ್ತಮ ಶಿಕ್ಷಕರನ್ನು ಒಳಗೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಪೋಷಕರು ಸೇರಿರುವಂತೆ ಮನವಿ ಮಾಡಿದರು. ಸಿಆರ್ಪಿ ಶಾಂತಮ್ಮ ಮಾತನಾಡಿ, ಎಲ್ಲಾ ಸರ್ಕಾರಿ ಶಾಲೆ ಎಸ್ಡಿಎಂಸಿ ಸಮಿತಿಗಳನ್ನು ರಚನೆ ಮಾಡಿ ಎಸ್ ಡಿಎಂಸಿ ಕರ್ತವ್ಯಗಳ ಬಗ್ಗೆ ಹಾಗೂ ಶಾಲಾ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸುವುದು, ಗ್ರಾಮ ಪಂಚಾಯ್ತಿ ನಡುವೆ ಸಮನ್ವಯ ತರುವುದು. ಶಾಲೆಯನ್ನು ಉತ್ತಮ ಸ್ಥಿತಿಗೆ ತರುವ ಜವಾಬ್ದಾರಿ ಎಸ್ಡಿಎಂಸಿ ಸದಸ್ಯರ ಮೇಲೆ ಇದೆ ಎಂದರು. ಮುಖ್ಯ ಶಿಕ್ಷಕ ಚಂದ್ರಶೇಖರ್ ಎಚ್.ಎಸ್.ವೇದಮೂರ್ತಿ, ಶಿಕ್ಷಕ ಮುರಳೀಧರ, ಶೇಖರಪ್ಪ ಹಾಗೂ ಎಸ್ಡಿಎಂಸಿ ಸದಸ್ಯರು ಇದ್ದರು.