ಗಾಂಧಿ ಜಯಂತಿ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಕನ್ನಡಪ್ರಭ ವಾರ್ತೆ ಹಾಸನ ಅ.4
ರೋಟರಿ ಹಾಸನ ಮಿಡ್ ಟೌನ್ ಇಂಟರ್ಯಾಕ್ಟ್ ವಿಜಯ ಇಂಗ್ಲಿಷ್ ಸ್ಕೂಲ್ ಹಾಗೂ ಹಾಸನ ರಕ್ತ ನಿಧಿ ಕೇಂದ್ರದ ವತಿಯಿಂದ ವಿಜಯ ಇಂಗ್ಲಿಷ್ ಶಾಲೆ ಕೆ.ಆರ್. ಪುರಂನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಗಾಂಧಿಜಯಂತಿ ಪ್ರಯುಕ್ತ ಆಯೋಜಿಸಲಾಗಿತ್ತು. ರೋಟರಿಯನ್ಗಳು, ಶಾಲಾ ಶಿಕ್ಷಕವೃಂದ, ಶಿಕ್ಷಕೇತರರು ಹಾಗೂ ಪೋಷಕರು ಭಾಗವಹಿಸಿದ್ದರು. ರೋಟರಿ ಮಿಡ್ ಟೌನ್ ಅಧ್ಯಕ್ಷ ಆರ್. ಸತ್ಯನಾರಾಯಣ ರಕ್ತದಾನ ಮಾಡುವ ಮೂಲಕ ಶಿಬಿರ ಉದ್ಘಾಟಿಸಿದರು. ಪೋಷಕರು, ರೋಟರಿ ಸದಸ್ಯರು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿದರು. ವಿಜಯ ಶಾಲೆಯ ಸುಮಾರು 21 ಸಿಬ್ಬಂದಿ ರಕ್ತದಾನ ಮಾಡಿದ್ದು ವಿಶೇಷವಾಗಿತ್ತು. ಸದಸ್ಯ ಡಾ. ವಿಜಯಕುಮಾರ್, ರೋಟರಿ ತಾರಾ ಎಸ್. ಸ್ವಾಮಿ ರೋ. ಜಗದೀಶ್, ರೋ. ಕಿರಣ್, ರೋ. ಸಚಿನ್ ಶಿವಕುಮಾರ್ ಇತರರು ಭಾಗವಹಿಸಿದ್ದರು.