ಜಿಲ್ಲಾ ಸಹಕಾರ ಒಕ್ಕೂಟ ಮಂಡಳಿಗೆ ಪಿ.ಎಸ್. ನಿಂಗರಾಜು ಆಯ್ಕೆ
ಹಾಸನ: ಜಿಲ್ಲಾ ಸಹಕಾರ ಒಕ್ಕೂಟ ಆಡಳಿತ ಮಂಡಳಿ ಉಪಾಧ್ಯಕ್ಷರ ಚುನಾವಣೆ ಚುನಾವಣಾಧಿಕಾರಿ ಕೆ.ರಾಜಣ್ಣ ಅಧ್ಯಕ್ಷತೆಯಲ್ಲಿ ನಡೆದು ಉಪಾಧ್ಯಕ್ಷ ಸ್ಥಾನಕ್ಕೆ ಪಾಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಧ ಅಧ್ಯಕ್ಷ ಹಾಗೂ ಒಕ್ಕೂಟದ ನಿರ್ದೇಶಕ ಪಿ.ಎಲ್. ನಿಂಗರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಮಪತ್ರ ಒಂದೇ ಬಂದಿದ್ದರಿಂದ ಅವಿರೋಧ ಈ ಆಯ್ಕೆ ನಡೆದಿದೆ. ಒಕ್ಕೂಟದ ಅಧ್ಯಕ್ಷ ಕಾರ್ಲೆ ಇಂದ್ರೇಶ್, ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಆರ್.ಟಿ.ದ್ಯಾವೇಗೌಡ, ಮಾಜಿ ಉಪಾಧ್ಯಕ್ಷ ದೊಡ್ಡಬೀಕನಹಳ್ಳಿ ನಾಗರಾಜು, ಜಿಪಂ ಮಾಜಿ ಅಧ್ಯಕ್ಷ ಹಾಗೂ ಒಕ್ಕೂಟದ ನಿರ್ದೇಶಕ ಬಿ.ಡಿ.ಚಂದ್ರೇಗೌಡ ಮತ್ತು ಆಡಳಿತ ಮಂಡಳಿ ನಿರ್ದೇಶಕರು ಇದ್ದರು. ನೂತನ ಉಪಾಧ್ಯಕ್ಷ ಪಿ.ಎಲ್. ನಿಂಗರಾಜುರನ್ನು ಅಭಿನಂದಿಸಲಾಯಿತು.