ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ದೈಹಿಕ ಬದಲಾವಣೆ: ಯುವ ಜನಾಂಗಕ್ಕೆ ತಿಳಿವಳಿಕೆ ಅವಶ್ಯ'

Rashmi Kasaragodu
Updated On : 6 Oct 2013, 12:07 pm

ಹಾಸನ: ಹದಿಹರೆಯದವರಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಸಾಕಷ್ಟು ಸಮಸ್ಯೆಗಳಿದ್ದು, ಅವುಗಳನ್ನು ಬಹಿರಂಗವಾಗಿ ಹೇಳಿಕೊಳ್ಳಲಾಗದೆ ಹತ್ತು ಹಲವು  ತೊಂದರೆಗಳಿಗೆ ತುತ್ತಾಗುವ ಸಾಧ್ಯತೆಗಳಿವೆ.
 ಇದರ ಬಗ್ಗೆ ಅರಿವು ಮೂಡಿಸಬೇಕಾದುದು ಅತ್ಯಗತ್ಯವಾಗಿದೆ  ಎಂದು ಖ್ಯಾತ  ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಎ.ಸಾವಿತ್ರಿ ಹೇಳಿದರು.
 ಶ್ರೀಗಂಧ ಸೇವಾ ಸಂಸ್ಥೆ  ಹಾಗೂ ಬಿ.ಈ.ಜಿ. ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ  ಆರೋಗ್ಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
 ದೈಹಿಕವಾಗಿ ಉಂಟಾಗುವ ಬದಲಾವಣೆಗಳ ಬಗ್ಗೆ ಯುವಕ ಯುವತಿಯರು ಸಾಕಷ್ಟು ವಿಚಾರಗಳನ್ನು ತಿಳಿದುಕೊಳ್ಳ ಬೇಕಾದುದು ಅವಶ್ಯಕ.
 ಅದರಲ್ಲಿಯೂ ಈ ಹಂತದಲ್ಲಿ  ದಾರಿತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಭಾರಿ ಅಪಾಯವನ್ನೇ ಎದುರಿಸ ಬೇಕಾಗುತ್ತದೆ ಆದ ಕಾರಣ ಆರೋಗ್ಯ ಹಾಗೂ ನೈತಿಕತೆಯನ್ನು ಕಾಪಾಡಿಕೊಳ್ಳ ಬೇಕು ಕ್ಷಣಿಕವಾದ ಆಕರ್ಷಣೆಗಳಿಗೆ ಬಲಿಯಾಗಬಾರದು. ಇದರಿಂದ ಏಡ್ಸ್ನಂತಹ ಮಹಾಮಾರಿಗೆ ತುತ್ತಾಗುವ ಅಪಾಯವಿದೆ ಎಂದು ಎಚ್ಚರಿಸಿದರು.
 ಬಿ.ಈ.ಜಿ.ಕಾಲೇಜಿನ ಅಧ್ಯಕ್ಷ ಜಗದೀಶ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ಅನೇಕ ವಿಚಾರಗಳ ಬಗ್ಗೆ ಆಕರ್ಷಣೆಗಳು ಹೆಚ್ಚಾಗುವ ಮೂಲಕ ಉತ್ತಮ ಬದುಕನ್ನು ಕಟ್ಟಿಕೊಳ್ಳುವುದರಿಂದ ವಿಮುಖರಾಗುವಂತಹ  ಉದಾಹರಣೆಗಳನ್ನು ಕಾಣುತ್ತಾ ಇದ್ದೇವೆ.
  ಆದ್ದರಿಂದ   ಸಾಧ್ಯವಾದಷ್ಟು ಅವರಿಗೆ ಉತ್ತಮ ದಾರಿಯ ಬಗ್ಗೆ ಅರಿವು ಮೂಡಿಸುವುದು ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ ಎಂದು ಅಭಿಪ್ರಾಯ ಪಟ್ಟರು.
 ಶ್ರೀಗಂಧ ಸೇವಾಸಂಸ್ಥೆ ಗೌರವಾಧ್ಯಕ್ಷ ಎಚ್.ಆರ್.ಹರೀಶ್ ಕೋಟೆ ಮಾತನಾಡಿ,  ಇತ್ತೀಚಿನ ದಿನಗಳಲ್ಲಿ ನಡೆಯುವ ಬಹುತೇಕ ಅಪರಾಧ ಪ್ರಕೆರಣಗಳಲ್ಲಿ ಹದಿಹರೆಯದವರು ಅದರಲ್ಲಿಯೂ ವಿದ್ಯಾರ್ಥಿಗಳು ಭಾಗಿಯಾಗುತ್ತಿರುವುದು ಆತಂಕದ ವಿಚಾರವಾಗಿದೆ ಎಂದು ನುಡಿದರು.
 ಅದರಲ್ಲಿಯೂ ಅತ್ಯಾಚಾರದಂತಹ ಘಟನೆಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ವಿಚಾರವಾಗಿದ್ದು, ಅವರಿಗೆ ಓದಿನೊಂದಿಗೆ ನೈತಿಕತೆಯ ಬಗ್ಗೆಯೂ ಮನವರಿಕೆ ಮಾಡಿಕೊಡಬೇಕಾದುದು ಅತ್ಯವಶ್ಯಕವಾಗಿದೆ ಎಂದು ಹೇಳಿದರು.
 ಶ್ರೀ ಗಂಧ ಸೇವಾಸಂಸ್ಥೆ ಅಧ್ಯಕ್ಷ ಎಸ್.ಡಿ.ರಂಗಸ್ವಾಮಿ ಮಾತನಾಡಿ, ಮನುಷ್ಯ ನೆಮ್ಮದಿಯಾಗಿ ಬದುಕಲು ಹಣದ ಅವಶ್ಯಕತೆ ಶೇ40 ರಷ್ಟಾದರೆ ಆರೋಗ್ಯ ಹಾಗೂ ಇತರೆ ವಿಚಾರಗಳ ಪಾತ್ರ ಶೇ60 ರಷ್ಟಿದೆ.
  ಆದ ಕಾರಣ ಹಣಕ್ಕಿಂತಲೂ ಇತರೆ ವಿಚಾರಗಳ ಬಗ್ಗೆಯೂ ಹೆಚ್ಚಿನ ಕಾಳಜಿವಹಿಸಬೇಕು ಅದರಲ್ಲಿಯೂ ಆರೋಗ್ಯ ಕಾಪಾಡಿಕೊಳ್ಳುವ ವಿಚಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ತಿಳಿಸಿದರು.
 ಆರೋಗ್ಯದ ಬಗ್ಗೆ ಡಾ.ಸಾವಿತ್ರಿ ಉಪನ್ಯಾಸ ನೀಡಿದರು. ಸಂಸ್ಥೆ ನಿರ್ದೇಶಕ ಜಯಪಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಶ್ರೀಗಂಧ ಸೇವಾಸಂಸ್ಥೆ ಉಪಾಧ್ಯಕ್ಷ ರಾಜು, ಕಾರ್ಯದರ್ಶಿ ಗಜೇಂದ್ರ, ಕಾಲೇಜಿನ ಪ್ರಾಂಶುಪಾಲೆ  ರೇಖಾ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪನ್ಯಾಸಕರು ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement