ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪುರಸಭೆ ಅವ್ಯವಹಾರ: ಸಿಐಡಿ ತನಿಖೆಗೆ ಆಗ್ರಹ

Rashmi Kasaragodu
Updated On : 6 Oct 2013, 12:05 pm

ಕ.ಪ್ರ. ವಾರ್ತೆ೤ ಅರಸೀಕೆರೆ೤ ಅ.5
ಪಟ್ಟಣ ಪುರಸಭೆಯಲ್ಲಿ ಕಳೆದ 2 ವರ್ಷಗಳಿಂದ ಅಧಿಕಾರಿಗಳು ನಡೆಸಿರುವ ಅವ್ಯವಹಾರ ಬಗ್ಗೆ ಸಿಐಡಿ ತನಿಖೆ ನಡೆಸಬೇಕೆಂದು ಪುರಸಭಾ ಮಾಜಿ ಸದಸ್ಯ ಹಾಗೂ ಜಿಲ್ಲಾ ಬಿಜೆಪಿ ವಕ್ತಾರ ವಕೀಲ ಎನ್.ಡಿ.ಪ್ರಸಾದ್ ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಸಭೆಯ ಕೆಲ ಅಧಿಕಾರಿಗಳು ಕೆಲ ಚುನಾಯಿತ ಪ್ರತಿನಿಧಿಗಳೊಂದಿಗೆ ಶಾಮೀಲಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಲಾಗಿರುವ ಎಲ್.ಇ.ಡಿ. ದೀಪಗಳ ಅಳವಡಿಕೆಯಲ್ಲಿ, ಸಾಮಾಗ್ರಿಗಳ ಖರೀದಿ ಸಂಬಂಧಿಸಿದ ಅಂದಾಜು ಪಟ್ಟಿ ತಯಾರಿಕೆ, ಪಟ್ಟಣದಲ್ಲಿ ನಡೆದಿರಬಹುದಾದ ಕಾಮಗಾರಿಗಳಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆಸಿ ಕೋಟ್ಯಂತರ ರು. ಹಗಲು ದರೋಡೆ ನಡೆಸಿದ್ದಾರೆ ಎಂದು ಆಪಾದಿಸಿದರು.
ಈ ಹಿಂದೆ ಪುರಸಭಾ ಮುಖ್ಯಾಧಿಕಾರಿಯಾಗಿದ್ದ ರಂಗೇಗೌಡರ ಮುಗ್ಧತೆಯನ್ನು ದುರುಪಯೋಗಪಡಿಸಿಕೊಂಡು ಸಿಕ್ಕ ಸಿಕ್ಕ ಕಡತಗಳಿಗೆಲ್ಲಾ ಸಹಿ ಮಾಡಿಸುವ ಮೂಲಕ ಭಾರಿ ಪ್ರಮಾಣದ ಅವ್ಯವಹಾರವೆಸಗಿದ್ದಾರೆ. ಪಟ್ಟಣ ಪುರಸಭೆಗೆ ನೂರಾರು ಕೋಟಿ ರು. ಆದಾಯ ತಂದುಕೊಡುವ ಚಿರಾಸ್ತಿಗಳಿಗೆ ಇವುಗಳ ಬಾಡಿಗೆ, ದುರಸ್ತಿ ಇನ್ನಿತರೆ ಕಾಮಗಾರಿಗಳಲ್ಲೂ ಸಾಕಷ್ಟು ಲೋಪದೋಷಗಳು ನಡೆದಿವೆ ಎಂದು ದೂರಿದರು.
ಪಟ್ಟಣಕ್ಕೆ ಪ್ರಸ್ತುತ ಒಳಚರಂಡಿ ಹಾಗೂ ಕುಡಿಯುವ ನೀರಿನ ಕಾಮಗಾರಿಯಲ್ಲೂ ಗುಣಮಟ್ಟದ ಕೊರತೆ ಕಂಡುಬರುತ್ತಿದೆ. ಪರಿಸ್ಥಿತಿ ಹೀಗಿದ್ದರೂ ಪುರಸಭಾ ಆಡಳಿತ ಮಾತ್ರ ನಿದ್ರಾವಸ್ಥೆಯಲ್ಲಿರುವುದು ದುರಂತದ ಸಂಗತಿ ಎಂದರು. ಈ ಸಂಬಂಧ ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಬೇಕು. ಕಾಮಗಾರಿಗಳ ಗುಣಮಟ್ಟ, ಹಣ ದುರುಪಯೋಗ ಹಾಗೂ ಅವ್ಯವಹಾರ ನಡೆಸಿರುವಂತಹ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಂಡು ನಡೆದಿರುವ ಅವ್ಯವಹಾರವನ್ನು ಸಿಐಡಿಯಂತಹ ಉನ್ನತ ಮಟ್ಟದ ಸಂಸ್ಥೆಯಿಂದ ಪಾರದರ್ಶಕ, ನಿಷ್ಪಕ್ಷಪಾತ ತನಿಖೆಗೆ ಆದೇಶಿಸಲು ಮುಂದಾಗಬೇಕೆಂದು ಆಗ್ರಹಿಸಿದರು. ತಾಲೂಕು ಬಿಜೆಪಿ ಅಧ್ಯಕ್ಷ ಹರಳಕಟ್ಟ ರಮೇಶ್, ಪ್ರಧಾನ ಕಾರ್ಯದರ್ಶಿ ಮನೋಜಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement