ಬಾಗೂರಿನಲ್ಲಿ ಆಧಾರ್ ನೋಂದಣಿ ಕೇಂದ್ರ ಉದ್ಘಾಟನೆ
ನುಗ್ಗೇಹಳ್ಳಿ (ಚನ್ನರಾಯಪಟ್ಟಣ ತಾ.): ಬಾಗೂರಿನ ಪ್ರಾಥಮಿಕ ಶಾಲಾ ಕಟ್ಟಡದಲ್ಲಿ ಆಧಾರ್ ನೋಂದಣಿ ಕೇಂದ್ರವನ್ನು ಜಿಲ್ಲಾ ಪಂಚಾಯ್ತಿ ಸದಸ್ಯ ಶಿವಶಂಕರ್ಕುಂಟೆ ಉದ್ಘಾಟಿಸಿದರು.
ಬಾಗೂರು ಹೋಬಳಿಯ ತಗಡೂರು ಎಂ.ಶಿವರ, ಕೆಂಬಾಳು, ಅಣತಿ, ಕಾರೇಹಳ್ಳಿ, ಬ್ಯಾಡರಹಳ್ಳಿ, ಸಾತೇನಹಳ್ಳಿ ಪಂಚಾಯಿತಿಯ ಹಳ್ಳಿಗಳಿಗೆ ಹಂತ ಹಂತವಾಗಿ ತಿಳಿಸಿ ಆಧಾರ್ ಕಾರ್ಡ್ ಕೊಡಿಸಲಾಗುವುದು ಎಂದು ಮಾಜಿ ಪ್ರಧಾನ ಶಿವಣ್ಣ ತಿಳಿಸಿದರು.
ರೆವಿನ್ಯು ಇನ್ಸ್ಪೆಕ್ಟರ್ ಗಿರೀಶಬಾಬು, ತಾಪಂ ಸದಸ್ಯ ಮಲ್ಲೇಶ್ ಬಸವರಾಜು, ಕೃಷಿ ಅಧಿಕಾರಿ ಆದರ್ಶ, ಗ್ರಾಮ ಲೆಕ್ಕಾಧಿಕಾರಿ ಅಶೋಕ್ ಇನ್ನು ಮೊದಲಾದವರು ಇದ್ದರು.