ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ವಿದ್ಯಾರ್ಥಿ ಪದಕ್ಕೆ ಅಂತ್ಯವಿಲ್ಲ'

Rashmi Kasaragodu
Updated On : 6 Oct 2013, 12:05 pm

ಕನ್ನಡಪ್ರಭ ವಾರ್ತೆ, ಹಾಸನ, ಅ.5
ವಿದ್ಯಾರ್ಥಿ ಎಂಬ ಪದಕ್ಕೆ  ಅಂತ್ಯವಿಲ್ಲ, ಅದು ನಿರಂತರವಾದುದು. ಜೀವಮಾನದುದ್ದಕ್ಕೂ ಕಲಿಯುವುದು ಇದ್ದೇ ಇರುತ್ತದೆ ಎಂದು ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಚ್.ಎನ್. ರೂಪರಾಜಚಂದನ್ ತಿಳಿಸಿದರು.
ನಗರದ ಸರ್ಕಾರಿ ಕಲಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ವಿಭಾಗದಲ್ಲಿ ಏರ್ಪಡಿಸಿದ್ದ ಒಂದು ದಿನದ ಖ್ಕಿಂ - ಏಖಉ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದ ಅವರು, ಉನ್ನತ ಶಿಕ್ಷಣದ ಭಾಗವಾಗಿರುವ  ನಾವು ಎಲ್ಲರೊಂದಿಗೆ ಉತ್ತಮ ಸಂಪರ್ಕ ಹೊಂದಬೇಕು. ಇದರ ಮೂಲಕ ವ್ಯಕ್ತಿತ್ವವನ್ನು ಅಳೆಯಲಾಗುತ್ತದೆ ಎಂದು ಹೇಳಿದರು. ಪ್ರತಿಯೊಬ್ಬ ಸಾಧಕರ ಹಿನ್ನೆಲೆಯೂ ಏಳುಬೀಳುಗಳಿಂದ ಸಮ್ಮಿಲನಗೊಂಡಿದೆ. ಯಾರೂ ನಿರಾಶವಾದಿಗಳಾಗದೆ,  ಬದಲಾವಣೆಯ ಪ್ರಕ್ರಿಯೆಯನ್ನು ಅಳವಡಿಸಿಕೊಂಡು ಪ್ರಶ್ನೆ ಮಾಡುವ ಮನೋಭಾವ  ಬೆಳೆಸಿಕೊಳ್ಳಬೇಕು. ನಿರಂತರ ಕಲಿಕೆಯಲ್ಲಿ ತೊಡಗಿದಾಗ ಮಾತ್ರ ಸಾಧನೆ ಸಾಧ್ಯ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ಇದೊಂದು  ಸಾರ್ಥಕ ತರಬೇತಿ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಐ.ಎಂ.ಮೋಹನ್  ಖ್ಕಿಂ - ಏಖಉ  ಎಂಬುದು  ಅರ್ಥಪೂರ್ಣ ಕಾರ್ಯಕ್ರಮ. ದೇಶದ ಭವಿಷ್ಯ ಮಾನವ ಶಕ್ತಿಯ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ಯುವ ಪೀಳಿಗೆ ಸಂಪನ್ಮೂಲರಾಗಬೇಕೆಂದು ಹೇಳಿದರು. ಪವಿತ್ರ ಪ್ರಾರ್ಥಿಸಿದರು.  ಕಾವ್ಯ ಸ್ವಾಗತಿಸಿದರು. ಶ್ರುತಿ ವಂದಿಸಿದರು. ಪ್ರಸನ್ನ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement