ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಂಧ್ಯಾ ಸುರಕ್ಷಾ ಮಾಸಿಕ ಪಿಂಚಣಿ ಹೆಚ್ಚಳಕ್ಕೆ ಮನವಿ

Rashmi Kasaragodu
Updated On : 6 Oct 2013, 12:09 pm

ಹೊಳೆನರಸೀಪುರ: ಅಶಕ್ತರು ಹಾಗೂ ಅಸಹಾಯಕ ಹಿರಿಯ ನಾಗರಿಕರಿಗೆ ಸರ್ಕಾರ ವೈದ್ಯಕೀಯ ಸೇವೆಯನ್ನು ಉಚಿತವಾಗಿ ನೀಡುವುದೂ ಸೇರಿದಂತೆ ಸಂಧ್ಯಾ ಸುರಕ್ಷಾ ಯೋಜನೆಯಡಿಯಲ್ಲಿ ನೀಡುತ್ತಿರುವ ಮಾಸಿಕ ಪಿಂಚಣಿ 500 ರು.ನಿಂದ 1ಸಾವಿರ ರು.ಗೆ ಏರಿಸುವಂತೆ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಮಾಜಿ ಅಧ್ಯಕ್ಷ  ರಾಮಚಂದ್ರ ಪುತ್ತೂರಾಯ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
 ಇಲ್ಲಿ ನಡೆದ ಅಂತಾರಾಷ್ಟ್ರೀಯ ವಯಸ್ಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿರಿಯ ನಾಗರಿಕರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಹಲವು ಸೌಲಭ್ಯಗಳನ್ನು ನೀಡುತ್ತಿರುವುದನ್ನು ಸ್ವಾಗತಿಸಿದ ಅವರು ಈ ಯೋಜನೆಗಳು ಇಂದಿಗೂ ಸೂಕ್ತ ಪ್ರಚಾರದ ಕೊರತೆಯಿಂದಾಗಿ ಎಷ್ಟೋ ಹಿರಿಯ ನಾಗರಿಕರನ್ನು ತಲುಪುತ್ತಿಲ್ಲ ಎಂದು ವಿಷಾದಿಸಿದರು.
 ಹಿರಿಯ ನಾಗರಿಕರನ್ನು ಗುರುತಿಸುವ ಹಾಗೂ ಗೌರವಿಸುವ ನಿಟ್ಟಿನಲ್ಲಿ ಸರ್ಕಾರ ವಯಸ್ಕರ ದಿನಾಚರಣೆಯನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ವಿಚಾರ ಎಂದ ಅವರು, ಹಿರಿಯ ನಾಗರಿಕರು ಕೂಡಾ ಜವಾಬ್ದಾರಿಯಿಂದ ಕಿರಿಯರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಅನುಭವಗಳನ್ನು ಧಾರೆ ಎರೆಯುವಂತೆ ಕೋರಿದರಲ್ಲದೇ ತಾಲೂಕಿನಲ್ಲಿ ಸರ್ಕಾರದ ಸವಲತ್ತು ಪಡೆಯುತ್ತಿರುವ 5945 ಹಿರಿಯ ನಾಗರಿಕರುಗಳಿದ್ದರೂ ಪ್ರಚಾರ ಹಾಗೂ ಮಾಹಿತಿಯ ಕೊರತೆಯಿಂದಾಗಿ ಕೇವಲ ಬೆರಳೆಣಿಕೆಯಷ್ಟು ಮಾತ್ರವೇ ಹಿರಿಯ ನಾಗರಿಕರು ಸಮಾರಂಭಕ್ಕೆ ಆಗಮಿಸಿರುವುದನ್ನು ಕಂಡು ವಿಷಾದಿಸಿದರು.
 ಸಮಾರಂಭ ಉದ್ಘಾಟಿಸಿದ ಪುರಸಭೆ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್ ಇಂದಿನ ದಿನಗಳಲ್ಲಿ ಹಿರಿಯರ ಮಾರ್ಗದರ್ಶನ ಹಾಗೂ ಅವರ ಹಿತವಚನಗಳು ಯಾರಿಗೂ ಬೇಡದಂತಾಗಿದ್ದು, ಈ ಸಂದರ್ಭದಲ್ಲಿ ಸರ್ಕಾರ ಹಿರಿಯ ನಾಗರಿಕರನ್ನು  ಗೌರವಿಸುವ ಉದ್ಧೇಶದಿಂದ ವಯಸ್ಕರ ದಿನಾಚರಣೆಯನ್ನು ಆರಂಭಿಸಿರುವುದು ಶ್ಲಾಘನೀಯ ವಿಚಾರ ಎಂದರು. ಹಿರಿಯ ನ್ಯಾಯವಾದಿ ಎ.ತಾಂಡವೇಶ್ವರ್ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಎಚ್.ಆರ್.ಕಲಾವತಿ ಅಧ್ಯಕ್ಷತೆ ಸಭೆಯ ವಹಿಸಿದ್ದರು.
   ಹಿರಿಯ ವಕೀಲ ರಾಮಕೃಷ್ಣಯ್ಯ, ಪುರಸಭೆ ಮಾಜಿ ಅಧ್ಯಕ್ಷ ಮಹಮದ್ಪಾಷ, ಪುಷ್ಪಾವತಿ, ಗೌರಮ್ಮ, ಉಪಾಧ್ಯಕ್ಷ ಎಚ್.ಕೆ.ರಘುರಾಮ್, ಪುರಸಭೆ ಸದಸ್ಯ  ಎ.ರವಿಕುಮಾರ್, ಎಚ್.ಸಿ.ಬಸವರಾಜ್, ಎಚ್.ಎಸ್.ಸ್ವಾಮಿ, ಜಯಕಾಂತಮ್ಮ, ಸುಮ, ರಾಘವೇಂದ್ರ, ಸಲೀಂ ಇತರರು ಇದ್ದರು. ಪುರಸಭೆ ವ್ಯವಸ್ಥಾಪಕ ನಂಜುಂಡಶೆಟ್ಟಿ ಕಾರ್ಯಕ್ರಮ ನಡೆಸಿಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement