ಎಸ್‌ಬಿಎಂಗೆ 100 ವರ್ಷ: ಜಾವಗಲ್ ಶಾಖೆಯಲ್ಲಿ ಸಂಭ್ರಮಾಚರಣೆ
ಕ.ಪ್ರ. ವಾರ್ತೆ ಜಾವಗಲ್ ಅ.6
ಇಲ್ಲಿನ ಎಸ್‌ಬಿಎಂ ಶಾಖೆಯಲ್ಲಿ ಬ್ಯಾಂಕ್‌ಗೆ 100 ವರ್ಷ ತುಂಬಿದ ಸಂಭ್ರಮವನ್ನು ಬ್ಯಾಂಕ್‌ನ ಚಿಹ್ನೆಯಾಕಾರದ 3 ಕೆ.ಜಿ. ತೂಕದ ಕೇಕನ್ನು ಶಾಖಾಧಿಕಾರಿ ಕಲೀಂದ್ರಕುಮಾರ್, ಗ್ರಾಹಕ ಜೆ.ಓ.ಈರೇಗೌಡ ಕತ್ತರಿಸುವ ಮೂಲಕ ಆಚರಿಸಿದರು. ಇದೇ ವೇಳೆ ಜಾವಗಲ್ ಹೋಬಳಿ ಧನಂಜಯಪುರ-ಕೆರೆಕೋಡಿಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಕೆಂಟ್ ಶುದ್ಧ ಕುಡಿಯುವ ನೀರಿನ ಉಪಕರಣವನ್ನು ಬ್ಯಾಂಕಿನ ವತಿಯಿಂದ ಉಚಿತವಾಗಿ ನೀಡಲಾಯಿತು. ಶಾಖಾಧಿಕಾರಿ ಕಲೀಂದ್ರಕುಮಾರ್ ಮಾತನಾಡಿ ಜಾವಗಲ್ ಶಾಖೆ ಪ್ರಾರಂಭವಾಗಿ 6 ತಿಂಗಳಾಗಿದ್ದು, ಗ್ರಾಹಕರ ಸಹಕಾರದಿಂದ 5 ಕೋಟಿ ರು.ಗಳಿಗೂ ಹೆಚ್ಚಿನ ವಹಿವಾಟು ನಡೆಸುತ್ತಿದೆ ಹಾಗೂ 2.7ಕೋಟಿ ರು. ಠೇವಣಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ಗ್ರಾಹಕ ಜೆ.ಎಂ.ಅನಿಲ್‌ಕುಮಾರ್, ಪುಷ್ಪಗಿರಿ ಚಂದ್ರಣ್ಣ, ರಮೇಶ್ ಪುರೋಹಿತ್, ಯಶೋಧರ, ಶ್ರೀಧರ, ಪೊಲೀಸ್ ಮಂಜೇಗೌಡ ಮತ್ತು ಶಾಖಾ ಸಿಬ್ಬಂದಿ ಎಸ್.ಕೆ.ಮಂಜುನಾಥ್, ಮಹಮ್ಮದ್‌ಸಾಹಿಲ್ ಇದ್ದರು.