ತೆಂಗು ಬೆಳೆಗಾರರಿಗೆ ಮಿಶ್ರಬೆಳೆ ಕುರಿತು ಮಾಹಿತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಅರಸೀಕೆರೆ ಅ.6
ತಾಲೂಕಿನ ಉಂಡಿಗನಾಳು ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಈ ಭಾಗದ ತೆಂಗು ಬೆಳೆಗಾರರಿಗೆ ತೆಂಗಿನ ತೋಟದಲ್ಲಿ ನೀರಿನ ನಿರ್ವಹಣೆ, ತೆಂಗು ಬೆಳೆಯಲ್ಲಿ ಸಮಗ್ರ ರೋಗ ನಿರ್ವಹಣೆ, ತೆಂಗು ತೋಟದಲ್ಲಿ ಮಿಶ್ರ ಬೆಳೆಗಳು ಹಾಗೂ ತೆಂಗು ಬೆಳೆಯಲ್ಲಿ ಸಮಗ್ರ ಕೀಟ ನಿರ್ವಹಣೆ ಬಗ್ಗೆ ಪ್ರೊ. ಡಾ. ಎಂ. ಪ್ರಶಾಂತ್ ಸಮಗ್ರ ಮಾಹಿತಿ ನೀಡಿದರು. ನೂರಾರು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡರು. ತಾಲೂಕಿನ ಯೋಜನಾಧಿಕಾರಿ ಚೆನ್ನಪ್ಪಗೌಡ ಇದ್ದರು. ಕೃಷಿ ಅಧಿಕಾರಿ ಬಿ.ಕುಮಾರ್ ನಿರೂಪಿಸಿದರು.
ಮೇಲ್ವಿಚಾರಕ ಹಮೀದ್ ಸ್ವಾಗತಿಸಿದರು. ಸೇವಾ ಪ್ರತಿನಿಧಿ ನಿರ್ಮಲಾ ವಂದಿಸಿದರು. ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಶರತ್ಕುಮಾರ್, ಸೋಮಶೇಖರ್, ತಿಮ್ಮಮ್ಮ ಹಾಗೂ ರೈತರು ಇದ್ದರು.