ಬೈಲಹಳ್ಳಿಯಲ್ಲಿ ದೊಡ್ಡಕೆರೆ ಪುನಶ್ಚೇತನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಹಾಸನ ಅ.6
ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಹಾಗೂ ಬೈಲಹಳ್ಳಿ ಗ್ರಾಮ ಪಂಚಾಯತಿ ಆಶ್ರಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾಸತಿ ಯೋಜನೆಯಡಿ ಕೂಲಿ ಆಧಾರಿತ ಕಾಳತಮ್ಮನಹಳ್ಳಿ ದೊಡ್ಡಕೆರೆಯ ಪುನ:ಶ್ಚೇತನ ಹಾಗೂ ಅಭಿವೃದ್ಧಿ ಕಾಮಗಾರಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಶಾಸಕ ಎಚ್.ಎಸ್. ಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಿ, ದೊಡ್ಡಕೆರೆ ಪುನ:ಶ್ಚೇತನ ಹಾಗೂ ಅಭಿವೃದ್ಧಿಗಾಗಿ ಅಂದಾಜು ವೆಚ್ಚ 12 ಲಕ್ಷ ರು. ಅನುದಾನ ಬಿಡುಗಡೆಯಾಗಿದೆ. ಈ ಕಾಮಗಾರಿಯಡಿ ಏರಿ ಅಗಲೀಕರಣಕ್ಕಾಗಿ 1.95 ಲಕ್ಷ ರು, ಕೋಡಿ ನಿರ್ಮಾಣಕ್ಕೆ 85 ಸಾವಿರ ರು, ಸೋಪಾನಕಟ್ಟೆಗಾಗಿ 2.70 ಲಕ್ಷ ರು, ರಿವಿಟ್ಮೆಂಟ್ಗಾಗಿ 2 ರು ಲಕ್ಷ, ತೂಬಿನ ಕಾಲುವೆ ನಿರ್ಮಾಣಕ್ಕಾಗಿ 2.50 ಲಕ್ಷ ರು, ಕೆರೆಯ ಹೂಳು ತೆಗೆಯಲು 2 ಲಕ್ಷ ರು. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜಯಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷ ಬಿ.ಆರ್.ಸತ್ಯನಾರಾಯಣ, ತಾಪಂ ಸದಸ್ಯ ರಾಮಶೆಟ್ಟಿ, ಗ್ರಾಮಪಂಚಾಯ್ತಿ ಉಪಾಧ್ಯಕ್ಷ ಸುಂದ್ರೇಗೌಡ ಭಾಗವಹಿಸಿದ್ದರು.