'ಭಾರತೀಯರಲ್ಲಿ ಸ್ವಾತಂತ್ರ್ಯದ ಕೆಚ್ಚು ಮೂಡಿಸಿದ ಗಾಂಧೀಜಿ'
ಹಾಸನ: ನಗರದ ಸುಜಲ ಪದವಿ ಪೂರ್ವ ಕಾಲೇಜಿನಲ್ಲಿ ಗಾಂಧಿಜಯಂತಿ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಸುಲಜ ಶಿಕ್ಷಣ ಸಮೂಹ ಅಧ್ಯಕ್ಷ ಡಿ.ಸುಬ್ಬೇಗೌಡ ಮಾತನಾಡಿ, ಭಾರತೀಯರಲ್ಲಿ ಸ್ವಾತಂತ್ರ್ಯದ ಕೆಚ್ಚನ್ನು ಹೆಚ್ಚಿಸುವಲ್ಲಿ ಹಾಗೂ ಇಡೀ ದೇಶಕ್ಕೆ ಸಮರ್ಥ ನಾಯಕತ್ವ ನೀಡುವಲ್ಲಿ ಯಶಸ್ವಿಯಾದ ಗಾಂಧೀಜಿ ವ್ಯಕ್ತಿತ್ವವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯದರ್ಶಿ ಎಸ್.ಲೋಕೇಶ್, ಸುಜಲ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕುಮಾರ್, ಸುಜಲ ಪಿಯು ಕಾಲೇಜಿನ ಪ್ರಾಂಶುಪಾಲ ಜುಲ್ಫೀಕರ್ ಅಹಮ್ಮದ್, ಖಜಾಂಚಿ ಚಂದ್ರಶೇಖರ್, ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. ವಿದ್ಯಾರ್ಥಿನಿ ಸುಪ್ರಿಯ ಪ್ರಾರ್ಥಿಸಿದರು. ಗಣಿತ ಉಪನ್ಯಾಸಕ ಎಚ್.ವಿ.ಚೇತನ್ ಸ್ವಾಗತಿಸಿದರು.
ಗಾಂಧೀಜಿ ಆದರ್ಶ ಪಾಲಿಸಲು ಕರೆ
ಹಾಸನ: ಗಾಂಧೀಜಿ ಆದರ್ಶಗುಣಗಳನ್ನು ಯುವಕರು ಪಾಲಿಸಬೇಕು ಎಂದು ವಿಜಯ ಚೇತನ ಶಾಲೆಯ ಉಪನ್ಯಾಸಕ ವಾಸು ಕರೆ ನೀಡಿದರು. ಹಾಸನದ ಟೈಮ್ಸ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಗಾಂಧಿ ಜಯಂತಿ, ಶಾಸ್ತ್ರೀ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಲಾ ಮಕ್ಕಳಲ್ಲಿ ಗಾಂಧೀಜಿ ಅವರ ಜೀವನ ಚರಿತ್ರೆ ತಿಳಿಸಿಕೊಡುವುದರ ಮೂಲಕ ಅವರಲ್ಲಿ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುವುದು ಎಂದು ತಿಳಿಸಿದರು.
ಶಾಲಾ ಮಕ್ಕಳಿಗೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಉಮಾ ಎಸ್. ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು, ಶಾಲೆ ಅಧ್ಯಕ್ಷ ಸುರೇಂದ್ರಕುಮಾರ್, ಕಾರ್ಯದರ್ಶಿ ಬಿ.ಕೆ. ಗಂಗಾಧರ ಇತರರು ಇದ್ದರು.
ಎಲ್ಲರೂ ಗಾಂಧಿ ತತ್ವ ಪಾಲಿಸ ಬೇಕು
ಹಾಸನ: ನಗರದ ಬಸವೇಶ್ವರ ಬಡಾವಣೆಯಲ್ಲಿರುವ ಸರ್ವಜ್ಞ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧಿ ಮತ್ತು ಲಾಲ್‌ಬಹದ್ದೂರ್ ಶಾಸ್ತ್ರೀ ಜನ್ಮ ದಿನಾಚರಣೆ ನಡೆಯಿತು. ಸಂಸ್ಥೆ ಅಧ್ಯಕ್ಷ ಹಾಸನ್ ಶಂಕರ್ ಅವರು, ಗಾಂಧೀಜಿ ಮತ್ತು ಶಾಸ್ತ್ರಿಯವರ ಹೋರಾಟದ ಬಗ್ಗೆ ತಿಳಿಸಿದರು. ನಗರಸಭೆ ಸದಸ್ಯ ಅಮೀರ್‌ಜಾನ್ ಮಾತನಾಡಿ, ಪ್ರತಿಯೊಬ್ಬರೂ ಗಾಂಧಿ ತತ್ವ ಪಾಲಿಸಿ ಎಂದು ಕರೆ ನೀಡಿದರು. ಮಾಜಿ ಸೈನಿಕ ಸುಬ್ರಹ್ಮಣ್ಯ ಅವರು ಸ್ವಾತಂತ್ರ್ಯ ಸಮರದಲ್ಲಿ ಗಾಂಧೀಜಿಯವರ ಪಾತ್ರದ ಬಗ್ಗೆ ವಿವರಿಸಿದರು. ಶಾಲಾ ಮುಖ್ಯ ಶಿಕ್ಷಕ ಬಿ.ಆರ್. ಕಾಂತರಾಜ್, ಪೋಷಕರು, ಸಹ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ಮಧುಸೂದನ್ ನಿರೂಪಿಸಿದರು. ಶೃತಿ ಸ್ವಾಗತಿಸಿದರು. ಸಹ ಶಿಕ್ಷಕರಾದ ಶಶಿಕಲಾ, ಕನ್ಯಾಕುಮಾರಿ ಇದ್ದರು. ತೀರ್ಥಾವತಿ ವಂದಿಸಿದರು.