'ಭ್ರಷ್ಟಾಚಾರ ಬೇರುಸಮೇತ ಕಿತ್ತು ಹಾಕದ ಹೊರತು ಅಭಿವೃದ್ಧಿ ಅಸಾಧ್ಯ'
ಅರಸೀಕೆರೆ: ಭ್ರಷ್ಟಾಚಾರ ಈ ದೇಶದ ಬಹುದೊಡ್ಡ ಪಿಡುಗಾಗಿದ್ದು ಇದನ್ನು ಬೇರುಸಮೇತ ಕಿತ್ತುಹಾಕದ ಹೊರತು ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಸೈಯದ್ಪಾಷ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವೇದಿಕೆಯಿಂದ ಏರ್ಪಡಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭ್ರಷ್ಟಾಚಾರದಂತಹ ಪಿಡುಗಿನಿಂದಾಗಿ ವಿಶ್ವದ ಮುಂದೆ ಭಾರತ ತಲೆ ತಗ್ಗಿಸುವಂತಹ ಪರಿಸ್ಥಿತಿ ಎದುರಾಗಿದ್ದು ಇದರ ವಿರುದ್ಧ ಯುವಕರು ಎಚ್ಚೆತ್ತು ಹೋರಾಟ ನಡೆಸಿ ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತುಹಾಕಲು ಕಂಕಣಬದ್ಧರಾಗಬೇಕೆಂದು ಕರೆ ನೀಡಿದರು.
ಪ್ರೊ.ಲಿಂಗರಾಜು ಮಾನವ ಹಕ್ಕುಗಳು, ಮಕ್ಕಳ ಹಕ್ಕುಗಳು ಹಾಗೂ ಮಹಿಳೆಯರ ಹಕ್ಕುಗಳ ಕುರಿತಂತೆ ವಿಶೇಷ ಉಪನ್ಯಾಸ ನೀಡಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ.ಎಂ.ಈಶ್ವರಪ್ಪ ಸ್ವಾಗತಿಸಿದರು. ಆನಂದ್ ನಿರೂಪಿಸಿದರು.
ಗೀತಾ ವಂದಿಸಿದರು. ಕಾಲೇಜು ಪ್ರಾಧ್ಯಾಪಕ ದೊರೇಶ್, ವಿಶ್ವನಾಥ್, ನಾಗರಾಜ್, ಸುಬ್ರಹ್ಮಣ್ಯ, ಪರಮೇಶ್ವರಪ್ಪ ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.