ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ವಿವಿಧ ಸಂಸ್ಕೃತಿಯ ಭಾರತದಲ್ಲಿ ಹುಟ್ಟಿದ ನಾವೇ ಪುಣ್ಯವಂತರು'

Mainashree
Updated On : 6 Oct 2013, 10:59 am

ಹಾಸನ: ಸಮಾಜದ ಕೆಟ್ಟ ಶಕ್ತಿಯಿಂದ ವಿದ್ಯಾರ್ಥಿಗಳು ಪ್ರೇರಿತರಾಗದೆ ಈ ದೇಶ ನಮ್ಮದು, ಈ ದೇಶವನ್ನು ಉಳಿಸಿ ಬೆಳಸುವುದು ನಮ್ಮ ಗುರಿ ಎಂದು ಯೋಚಿಸಬೇಕು. ದೇಶದ ಒಳ್ಳೆಯ ನಾಗರೀಕರಾಗಿ ದೇಶ ಕಟ್ಟುವಂತಹ ಸನ್ಮಾರ್ಗದಲ್ಲಿ ಸಾಗಬೇಕು, ಭಾರತದಂತಹ ರಾಷ್ಟ್ರದಲ್ಲಿ ಹುಟ್ಟಿದ ಹಾಗೂ ವಿವಿಧ ಸಂಸ್ಕೃತಿಯೊಂದಿಗೆ ಬಾಳುವಂತಹ ಸುವರ್ಣ ಅವಕಾಶವನ್ನು ದೇವರು ಕಲ್ಪಿಸಿರುವುದೇ ನಮ್ಮ ಪುಣ್ಯ ಎಂದು ವಾತ್ಸಲ್ಯ ಆಸ್ಪತ್ರೆಯ ವೈದ್ಯ  ಡಾ. ಹಾರೂನ್ ಹೇಳಿದರು.
 ಇಲ್ಲಿನ ಚಿಪ್ಪಿನಕಟ್ಟೆಯಲ್ಲಿರುವ ಆಲ್ ಅಮೀನ್ ವಿದ್ಯಾಸಂಸ್ಥೆಯಲ್ಲಿ ಧಾರವಾಡದ ಕರ್ನಾಟಕ ಮುಸ್ಲಿಂ ಎಂಪ್ಲಾಯಿಸ್ ಕಲ್ಚರಲ್ ಅಸೋಸಿಯೇಷನ್ ಹಾಸನ ಘಟಕ ವತಿಯಿಂದ ಗಾಂಧಿಜಯಂತಿ ಅಂಗವಾಗಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಒಬ್ಬ ಕುಂಬಾರ ಹೇಗೆ ಬಿಂದಿಗೆಯನ್ನು ನಿರ್ಮಿಸುತ್ತಾನೋ ಹಾಗೆಯೇ ನನ್ನಂತಹ ಒಬ್ಬ ವೈದ್ಯನನ್ನು  ರೂಪಿಸುವಲ್ಲಿ  ಶಿಕ್ಷಕರ, ಪೋಷಕರ ಮಾರ್ಗದರ್ಶನದಲ್ಲಿ ಮಾರ್ಪಡಿಸಿರುವಂತಹ ಬಿಂದಿಗೆಯಂತೆ ನಾನು ಎಂದು ತಮ್ಮನ್ನೇ ಉದಾಹರಿಸಿದರು.
  ಚಿಪ್ಪಿನಕಟ್ಟೆ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ರಮೇಶ್ ಮಾತನಾಡಿ, ಎಲ್ಲಾ ಸಂಪತ್ತಿಗಿಂತ ವಿದ್ಯಾ ಸಂಪತ್ತು ಬಹಳ ಅಮೂಲ್ಯವಾದದ್ದು. ವಿದ್ಯೆಯನ್ನು ಕಲಿತು ದೇಶದ ಸತ್ಪ್ರಜೆಗಳಾಗಿ ಬಾಳಿ ಎಂದು ತಿಳಿ ಹೇಳಿದರು.
 ಜಿಲ್ಲಾ ಘಟಕದ ಅಧ್ಯಕ್ಷ ಅಲ್ಲಾಬಕಷ್ ಅಧ್ಯಕ್ಷತೆ ವಹಿಸಿದ್ದರು. ವಾಜಿದ್‌ಖಾನ್ ರಾಹತ್ ಉನ್ನಿಸಾ  ನಿರೂಪಿಸಿದರು. ಘಟಕದ ಉಪಾಧ್ಯಕ್ಷ ರವೂಫ್‌ಬೇಗ್ ಸ್ವಾಗತಿಸಿದರು. ಅಬ್ದುಲ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement