ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವೃದ್ಧಾಶ್ರಮಕ್ಕೆ ಹೆಚ್ಚಿದ ವಲಸೆ

Mainashree
Updated On : 6 Oct 2013, 8:22 am

ಬೇಲೂರು: ಪ್ರಸ್ತುತ ದಿನಮಾನದಲ್ಲಿ ಕುಟುಂಬದಲ್ಲಿ ಹಿರಿಯರನ್ನು ಕಡೆಗಣಿಸುತ್ತಾ ವೃದ್ಧಾಶ್ರಮಕ್ಕೆ ಕಳಿಸುತ್ತಿರುವುದು ವಿಷಾದನೀಯ ಎಂದು ವೇಲಾಪುರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಎಚ್.ಎಂ.ದಯಾನಂದ ಹೇಳಿದರು.
ಪಟ್ಟಣದ ನಿವೃತ್ತ ನೌಕರರ ಸಂಘ ಹಾಗೂ ತಾಲೂಕು ವೇಲಾಪುರಿ ಸಾಹಿತ್ಯ ವೇದಿಕೆ ಆಶ್ರಯದಲ್ಲಿ  ಹಮ್ಮಿಕೊಂಡಿದ್ದ ವಿಶ್ವ ಹಿರಿಯರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಚಿಕ್ಕ ಮಕ್ಕಳಿಂದ ಸಾಕಿ ಸಲಹಿ ದೊಡ್ಡವರನ್ನಾಗಿ ಮಾಡಿದ ತಂದೆ ತಾಯಿಯಂದಿರನ್ನು ಮಾನವೀಯತೆ ಇಲ್ಲದೆ ವೃದ್ಧಾಶ್ರಮಕ್ಕೆ ಕಳಿಸುವುದು ವಿದೇಶದ ಸಂಸ್ಕೃತಿಯಾಗಿದ್ದು ಈಗ ಸುಸಂಸ್ಕೃತ ಭಾರತದಲ್ಲೂ ಇಂತಹದು ಹೆಚ್ಚಾಗುತ್ತಿದೆ ಎಂದು ವಿಷಾದಿಸಿದರು. ಹಿರಿಯ ಪತ್ರಕರ್ತ ಹಳೇಬೀಡು ಅನಂತರಾಮು ಮಾತನಾಡಿ ನಿವೃತ್ತಿ ಎಂಬುದು ವೃತ್ತಿಗೆ ಮಾತ್ರ. ಆದರೆ ದೇಹಕ್ಕಲ್ಲ, ಕೆಲವರು ನಿವೃತ್ತಿಯಾದ ಬಳಿಕ ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತಿರುವದು ನಮ್ಮ ಮುಂದೆ ನಿದರ್ಶನವಿದೆ.
 ಇಂದಿನ ಬಹುತೇಕ ರಾಜಕಾರಣಿಗಳು ಯಾವ ವಯಸ್ಸಿನಲ್ಲಿ ಇದ್ದಾರೆ ಎಂದು ಅಲೋಚನೆ ಮಾಡಬೇಕು. ಸರ್ಕಾರ ಹಿರಿಯರಿಗೆ ಉತ್ತಮ ಸೌಲಭ್ಯಗಳನ್ನು ನೀಡಿದರೂ ಕೆಲ ಹಿರಿಯರಿಗೆ ಈ ಸೌಲಭ್ಯ ಅವಕಾಶಗಳು ದೊರೆಯುತ್ತಿಲ್ಲ. ಈ ನಿಟ್ಟಿನಲ್ಲಿ ಇಂತಹ ಸಂಘ-ಸಂಸ್ಥೆಗಳು ಜನಪರ ಕಾರ್ಯಗಳನ್ನು ಮಾಡಬೇಕು ಎಂದು ಮನವಿ ಮಾಡಿದರು. ಕಾನೂನಿನಲ್ಲಿ ಹಿರಿಯರನ್ನು ಕಡೆಗಣನೆ ಮಾಡಿದ ಪಕ್ಷದಲ್ಲಿ ಉಗ್ರ ಶಿಕ್ಷೆ ಇದೆ. ಹಿರಿಯರು ಕೂಡ ತಮ್ಮ ಕುಟುಂಬ ಬದುಕಿನಲ್ಲಿ ಪರಿಸ್ಥಿತಿಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಹಿರಿಯರಿಗೆ ಗೌರವ ನೀಡುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದರು.
ಶತನಾಟಕ ಸಾಹಿತಿ ಬೇಲೂರು ಕೃಷ್ಣಮೂರ್ತಿ ಮಾತನಾಡಿ,  ಮನಸ್ಸಿಗೆ ಮುಪ್ಪು ಇಲ್ಲ, ಮಾನಸಿಕವಾಗಿ ಸದೃಢವಾದ ಪಕ್ಷದಲ್ಲಿ ದೇಹ ಸದೃಢವಾಗುತ್ತದೆ.  ನಮ್ಮ ಚಿಂತನೆಗಳು ಜನಪರವಾಗಿ ಇರಲಿ ಹಾಗೂ ಆರೋಗ್ಯಕ್ಕೆ ಆದ್ಯತೆ ನೀಡಿ ಎಂದು ತಿಳಿಸಿದರು. ಸಂಘದ ಅಧ್ಯಕ್ಷ ರಾಜೇಗೌಡ, ಶಿವಮೂರ್ತಿ, ಮೊಗಪ್ಪಗೌಡ, ಸಾ.ರಂ. ಈರೇಗೌಡ, ಇಂದಿರಮ್ಮ  ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement