ಅಕ್ರಮ ಗಣಿಗಾರಿಕೆ 11 ಬಂಧನ, ಟ್ರ್ಯಾಕ್ಟರ್ ವಶ
ಆಲೂರು: ಯಾವುದೇ ಅನುಮತಿ ಪಡೆಯದೇ ಸ್ಫೋಟಕ ಬಳಸಿ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದ್ದ ಸ್ಥಳಕ್ಕೆ ತಹಸೀಲ್ದಾರ್ ಶಾರದಾಂಬ ನೇತೃತ್ವದ ತಂಡ ದಾಳಿ ನಡೆಸಿ 11 ಜನರನ್ನು ಬಂಧಿಸಿ, ಕ್ರಶರ್ಗೆ ಬಳಸುತ್ತಿದ್ದ 3 ಕಂಪ್ರೆಸರ್ಗಳು, 2 ಟ್ರ್ಯಾಕ್ಟರ್ನ್ನು ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ತಹಸೀಲ್ದಾರ್ ಶಾರದಾಂಬ, ಡಿವೈಎಸ್ಪಿ ಕುಮಾರಸ್ವಾಮಿ, ಇನ್ಸ್ಪೆಕ್ಟರ್ ಗುರುರಾಜ್ಯಿದ್ದ ತಂಡ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ರವಿ (28), ರಮೇಶ್ (35), ನಾಗರಾಜ್ (42), ಸೋಮಶೇಖರ್ (46), ಮಂಜುನಾಥ್ (23), ಮಂಜುನಾಥ್ (40), ತಿಮ್ಮೇಗೌಡ, ಅಶ್ವತ್ಥ (30), ರವಿ(30), ಕೃಷ್ಣಪ್ಪ (37) ಮತ್ತು ಸಿದ್ದೇಶ್ (21) ಎಂಬವರನ್ನು ಬಂಧಿಸಿದೆ.
ಸರ್ವೇ ನಂ.41ರ ಸ್ಥಳ ಗೋಮಾಳವಾಗಿದ್ದು, ಇಲ್ಲಿ ಅಕ್ರಮವಾಗಿ ಕಲ್ಲುಗಣಿಗಾರಿಗೆ ನಡೆಸುತ್ತಿದ್ದ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ತಹಸೀಲ್ದಾರ್ ನೇತೃತ್ವದ ತಂಡ ದಾಳಿ ನಡೆಸಿತು. ಈ ಕೃತ್ಯಕ್ಕೆ ಬಳಸುತ್ತಿದ್ದ ಜನರೇಟರ್, ಕೊರೆಯುವ ಯಂತ್ರ, 3 ಟ್ರ್ಯಾಕ್ಟರ್ ವಶಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಶಾಂತಿನಗರ ಬಿಜಿವಿಎಸ್ ಘಟಕ ಸಮಾವೇಶ
ಹಾಸನ: ತಾಲೂಕಿನ ಶಾಂತಿನಗರ ಘಟಕ ಬಿಜಿವಿಎಸ್ ದ್ವಿತೀಯ ಸಮಾವೇಶ ನಡೆಯಿತು.
ತಾಲೂಕು ಬಿಜಿವಿಎಸ್ ಕಾರ್ಯದರ್ಶಿ ಆರ್.ಸಿ.ಭೈರಪ್ಪ ಉದ್ಘಾಟಿಸಿದರು. ತಾಲೂಕು ಅಧ್ಯಕ್ಷ ಡಿ.ಟಿ.ಶಿವಣ್ಣ ಮತ್ತು ಘಟಕ ಉಸ್ತುವಾರಿ ತಾಲೂಕು ಸಮಿತಿ ಸದಸ್ಯ ಜಯಪ್ರಕಾಶ್ ಇದ್ದರು. ಅಧ್ಯಕ್ಷತೆಯನ್ನು ಘಟಕ ಬಿಜಿವಿಎಸ್ ಅಧ್ಯಕ್ಷ ದೇವರಾಜೇಗೌಡ ವಹಿಸಿದ್ದರು.
ಘಟಕ ಕಾರ್ಯದರ್ಶಿ ವೇದಶ್ರೀರಾಜ್ ವರದಿ ಮಂಡಿಸಿದರು. ತಾಲೂಕಿನ ಬೇರೆ ಬೇರೆ ಸಂಘಟನೆಗಳಿಂದ ಪ್ರತಿನಿಧಿಸಿದ್ದ ಪ್ರತಿನಿಧಿಗಳು ಮಾತನಾಡಿದರು. ನೂತನ ಘಟಕ ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು. ಘಟಕದ ನೂತನ ಅಧ್ಯಕ್ಷರಾಗಿ ಎಸ್.ಎನ್. ದೇವರಾಜೇಗೌಡ, ಉಪಾಧ್ಯಕ್ಷರಾಗಿ ಪದ್ಮ ಮಂಜುನಾಥ್ ಹಾಗೂ ಎನ್.ಕುಮಾರ್, ಕಾರ್ಯದರ್ಶಿಯಾಗಿ ವೇದಶ್ರೀರಾಜ್, ಸಹಕಾರ್ಯದರ್ಶಿಗಳಾಗಿ ಪ್ರದೀಪ್, ದೀಪಕ್.ಎಚ್.ಎಂ, ಖಜಾಂಚಿಯಾಗಿ ಕೆ.ವಿ.ಕವಿತ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಕ್ಷಿತ್, ಶಿಲ್ಪಶ್ರೀ ಹಾಗೂ ಶಾಶ್ವತ ಆಹ್ವಾನಿತರಾಗಿ ಚೈತ್ರ ಮತ್ತು ಪದ್ಮ ವೆಂಕಟೇಶ್ ಆಯ್ಕೆಯಾದರು. ದೇವರಾಜೇಗೌಡ ವಂದಿಸಿದರು.
ಲೋಕಾಯುಕ್ತ ಅಧೀಕ್ಷಕರ ಪ್ರವಾಸ
ಹಾಸನ: ಲೋಕಾಯುಕ್ತ ಹಾಸನ ವಿಭಾಗದ ಪೊಲೀಸ್ ಅಧೀಕ್ಷಕ ಡಾ.ಸಿ.ಬಿ.ವೇದಮೂರ್ತಿ ಮತ್ತು ಪೊಲೀಸ್ ಉಪಾಧೀಕ್ಷಕ ಹಾಗೂ ತಂಡದವರು ಅ.8 ರಂದು ಬೇಲೂರು ಮತ್ತು ಅ.9 ರಂದು ಸಕಲೇಶಪುರ ತಾಲೂಕು ಕೇಂದ್ರದಲ್ಲಿರುವ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಲಿದ್ದಾರೆ. ಭೇಟಿ ಸಮಯದಲ್ಲಿ ಸಾರ್ವಜನಿಕರು ತಮ್ಮ ಅಹವಾಲು ಸಲ್ಲಿಸಬಹುದಾಗಿದೆ.