ಇಂದು ಚಿಂತನಾ ಸಮಾವೇಶ
ಹೊಳೆನರಸೀಪುರ: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ಸಂಘಟನೆಯ ನೇತೃತ್ವದಲ್ಲಿ ಇದೇ ಅ.8ರ ಮಂಗಳವಾರ ಬೆಂಗಳೂರಿನ ಟೌನ್ಹಾಲ್ನಲ್ಲಿ ಪ್ರಬುದ್ಧ ಭಾರತದ ನಿರ್ಮಾಣಕ್ಕಾಗಿ ಜಾತಿಗಳ ಜನಸಂಖ್ಯಾವಾರು ಮೀಸಲಾತಿ ಕುರಿತು ಚಿಂತನಾ ಸಮಾವೇಶವನ್ನು ಏರ್ಪಡಿಸಲಾಗಿದೆ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಎಂ.ಸೋಮಶೇಖರ್ ತಿಳಿಸಿದ್ದಾರೆ.
ಸಮಾವೇಶವನ್ನು ಮೈಸೂರು ವಿವಿಯ ಪ್ರಾಧ್ಯಾಪಕ ಪ್ರೊ.ಅರವಿಂದ ಮಾಲಗತ್ತಿ ಅವರು ಉದ್ಘಾಟಿಸಲಿದ್ದಾರೆ, ಅಧ್ಯಕ್ಷೆತೆಯನ್ನು ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ವೆಂಕಗಿರಿಯಯ್ಯ ವಹಿಸಲಿದ್ದಾರೆ. ವಿ.ನಾರಾಯಣಸ್ವಾಮಿ, ರಾಜಕುಮಾರ್ ಭಾರತಿ, ಎಚ್.ಎನ್. ಸನಂದಕುಮಾರ್ ಇತರರು ಭಾಗವಹಿಸುವರು.