ದೇವಾಲಯಗಳಲ್ಲಿ ಕಳವಿಗೆ ವಿಫಲ ಯತ್ನ
ಹಿರೀಸಾವೆ, (ಚನ್ನರಾಯಪಟ್ಟಣ ತಾ): ಹೋಬಳಿಯ ದಿಡಗ ಹಳೇಗ್ರಾಮದಲ್ಲಿ ನೂತನ ಬಾಣೇಶ್ವರ ದೇವಸ್ಥಾನದಲ್ಲಿ ಕಳವಿಗೆ ಪ್ರಯತ್ನಿಸಲಾಗಿದೆ.
ದೇವಾಲಯದ ಮುಖ್ಯ ದ್ವಾರದ ಬೀಗ ಒಡೆಯುವ ಪ್ರಯತ್ನ ನಡೆದಿದ್ದು, ಹಾರೆಯಿಂದ ಮೀಟಿ ವಿಫಲರಾಗಿದ್ದಾರೆ. ಆದರೆ ಅಷ್ಟಕ್ಕೆ ಸುಮ್ಮನಾಗದ ಚೋರರು ಮುಂದೆ ಹೋಗಿ ಊರ ಹೊರಗಿನ ಪಿರಿಯಾಪಟ್ಟಣ ಅಮ್ಮನವರ ದೇವಸ್ಥಾನದ ಬೀಗ ಒಡೆದು ಬಾಗಿಲು ಮುರಿದು ಪೂಜಾ ಸಾಮಾಗ್ರಿಗಳನ್ನು ಹೊತ್ತೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ.
ಆದರೆ ದೇವಸ್ಥಾನಕ್ಕೆ ಸಂಬಂಧಿಸಿದ ಒಡವೆ, ಹಣ ಯಾವುದೂ ಕೂಡಾ ಸಿಗದಿರುವುದು ಚೋರರಿಗೆ ನಿರಾಸೆ ಉಂಟುಮಾಡಿದೆ. ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎಸ್ಐ ರೇಖಾಬಾಯಿ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.