ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬರದಲ್ಲೂ ಕೊಳವೆ ಬಾವಿಯಲ್ಲಿ ಉಕ್ಕಿದ ನೀರು!

Rashmi Kasaragodu
Updated On : 8 Oct 2013, 12:35 pm

ಅರಸೀಕೆರೆ: ಸತತ ಬರಗಾಲ, ಮಳೆ ಅಭಾವದಿಂದ ತಾಲೂಕಿನ ನೂರಾರು ಬೋರುಗಳು ನಿಂತು ಹೋಗಿ ಕುಡಿಯುವ ನೀರಿಗಾಗಿ ಜನರು ಹಾಹಾಕಾರ ಪಡುತ್ತಿರುವ ಸಂದರ್ಭದಲ್ಲಿ ಪವಾಡವೆಂಬಂತೆ ತಾಲೂಕಿನ ಕಣಕಟ್ಟೆ ಹೋಬಳಿ ನಾಗವೇದಿ ಗ್ರಾಮದಲ್ಲಿ ಹೊಸದಾಗಿ ಕೊರೆಸಿದ ಕೊಳವೆಬಾವಿಯಿಂದ ನೀರು ಉಕ್ಕುತ್ತಿದ್ದು, ಜನರು ತಂಡೋಪತಂಡವಾಗಿ ಬಂದು ಈ ವಿಸ್ಮಯ ವೀಕ್ಷಿಸುತ್ತಿದ್ದಾರೆ. ನಾಗವೇದಿ ಗ್ರಾಮದ ಗಂಗಾಬಸವೇಶ್ವರ ದೇವಸ್ಥಾನಕ್ಕೆ ಸೇರಿರುವ ಈ ಜಮೀನಿನಲ್ಲಿ ಹೊಸದಾಗಿ ಬೋರ್ ಕೊರೆಯಿಸಲು ಮುಂದಾದ ಜಿಪಂ ಇಂಜಿನಿಯರ್ ಶೇಖರಪ್ಪ ದೇವಸ್ಥಾನದ ಉನ್ನತಿಗಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಕೊಳವೆಬಾವಿ ಕೊರೆಯಿಸಿದ್ದು 250 ಅಡಿವರೆಗೂ ನೀರು ಬಾರದೆ ಆತಂಕ ಸೃಷ್ಟಿಸಿ ನಂತರ ಬೋರ್ವೆಲ್ನಿಂದ ಹೊರಚುಮ್ಮಿದ ನೀರು 2 ದಿನಗಳಿಂದ ನಿರಂತರವಾಗಿ ಹರಿಯುತ್ತಿದ್ದು ಇದನ್ನು ನೋಡಲು ಸುತ್ತಮುತ್ತಲ ಜನರು ಬಂದು ಇದು ದೇವರ ಮಹಿಮೆಯೆಂದು ಭಾವಿಸಿ ಗಂಗೆಗೆ ಪೂಜೆ ಸಲ್ಲಿಸಿ ತೆರಳುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement