ಮಳಲಿ ಗ್ರಾಮದಲ್ಲಿ ನವರಾತ್ರಿ ಮಹೋತ್ಸವಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಸಕಲೇಶಪುರ ಅ.7
ತಾಲೂಕಿನ ಮಳಲಿ ಗ್ರಾಮದಲ್ಲಿ ಚಾಮುಂಡೇಶ್ವರಿ ಅಮ್ಮನವರ ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಗ್ರಾಮ ದೇವತೆ ಚಾಮುಂಡೇಶ್ವರಿ ದೇವಿಗೆ ಮುಂಜಾನೆ 8 ರಿಂದ ವಿಧಿವತ್ತಾಗಿ ಆರಂಭವಾದ ಪೂಜೆ ಕಾರ್ಯಕ್ರಮಗಳ ನಂತರ ಮಧ್ಯಾಹ್ನ 1ಕ್ಕೆ ಆಹ್ವಾನ ಪೂರ್ವಕ ಗಣಪತಿ ಹೋಮ ಹಾಗೂ ಶೈಲ ಪುತ್ರಿ ಆಹ್ವಾನ ಪೂರ್ವಕ ಹೋಮ ನಡೆಸಲಾಯಿತು. ನವರಾತ್ರಿ ಉತ್ಸವದ ಅಂಗವಾಗಿ ಮುಂದಿನ 9 ದಿನ ಗ್ರಾಮದ ದೇವಸ್ಥಾನದಲ್ಲಿ ನಾನಾ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.