ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹಲ್ಲೆಕೋರರ ಬಂಧನಕ್ಕೆ ಪೌರಸೇವಾ ನೌಕರರ ಆಗ್ರಹ

Rashmi Kasaragodu
Updated On : 8 Oct 2013, 12:32 pm

ಕನ್ನಡಪ್ರಭ ವಾರ್ತೆ೤ ಹಾಸನ೤ ಅ.7
ನಗರಸಭೆಯ ನೀರು ಸರಬರಾಜು ವಿಭಾಗದ ನೌಕರನ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನು   ಬಂಧಿಸುವಂತೆ  ಆಗ್ರಹಿಸಿ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಆರೋಪಿಗಳನ್ನು ಇದುವರೆಗೂ ಬಂಧಿಸಿಲ್ಲ ಎಂದು ಜಿಲ್ಲಾ ಎಸ್ಪಿ ರವಿ ಚನ್ನಣ್ಣನವರಿಗೆ  ರಾಜ್ಯ ಪೌರಸೇವಾ ನೌಕರರು ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.
ನಗರಸಭೆಯ ನೀರು ಸರಬರಾಜು ವಿಭಾಗದ ನೌಕರ ನಿಂಗರಾಜ್ ಹಾಗೂ ದೇವೇಗೌಡ ಅವರ ಮೇಲೆ ಸೆ. 25 ರಂದು ಕರ್ತವ್ಯ ನಿರತರಾಗಿದ್ದಾಗ ಪೆನ್ಷನ್ ಮೊಹಲ್ಲ ಕಲ್ಯಾಡಿ ಸಾಹೇಬರ ವಠಾರದ ನಿವಾಸಿ ಅಪ್ರೋಜ್ಪಾಷ, ಸರ್ದಾರ್ಪಾಷ, ಫೈರೋಜ್ಪಾಷ ಹಲ್ಲೆ ಮಾಡಿದ್ದಾರೆ. ಪೆನ್ಷನ್ ಮೊಹಲ್ಲ ಪೊಲೀಸ್ ಠಾಣೆಗೆ ದೂರು ನೀಡಿ ಕೇಸು ದಾಖಲಿಸಲಾಗಿದೆ. ಆದರೆ ಆರೋಪಿಗಳನ್ನು ಇಲ್ಲಿಯವರೆಗೂ ಬಂಧಿಸಿಲ್ಲ ಎಂದು ದೂರಿದರು. ಸಂಘದ ಅಧ್ಯಕ್ಷ ಪ್ರವೀಣ್, ಕೃಷ್ಣಮೂರ್ತಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement