ಅಂಧ ಮಕ್ಕಳ ಶಾಲೆಯಲ್ಲಿ ಶ್ರಮದಾನ
ಹಾಸನ: ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನದ ಅಂಗವಾಗಿ ಇತ್ತೀಚೆಗೆ ನಗರದ ಸರ್ಕಾರಿ ಕಲಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ಉಪನ್ಯಾಸಕರ ಜತೆಗೂಡಿ ಎಂ.ಕೃಷ್ಣ ಅಂಧ ಮಕ್ಕಳ ಶಾಲಾ ಆವರಣದಲ್ಲಿ ಸ್ವಚ್ಛತಾ ಶ್ರಮದಾನ ಹಮ್ಮಿಕೊಳ್ಳಲಾಗಿತ್ತು.
ಇದೆ ವೇಳೆ ಗಾಂಧಿ ತತ್ವಗಳ ಉಲ್ಲಂಘನೆ ಕುರಿತ 'ಎತ್ತ ಪಯಣ' ನಾಟಕ ಪ್ರದರ್ಶನವೂ ನಡೆಯಿತು.
ನಂತರ ಎಂ.ಕೃಷ್ಣ ಅಂಧ ಮಕ್ಕಳ ಶಾಲಾ ವಿದ್ಯಾರ್ಥಿಗಳಿಗೆ ಹಣ್ಣು ವಿತರಿಸಿದರು. ಪ್ರಾಧ್ಯಾಪಕ ಡಾ. ಹೆಚ್.ಎಂ.ತಿಮ್ಮೇಗೌಡ ಮಾತನಾಡಿ, ಕೇವಲ ಗಾಂಧೀಜಿಯವರ ಭಾವಚಿತ್ರಕ್ಕೆ ನಮನ ಸಲ್ಲಿಸಿದರೆ ಸಾಲದು. ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಹಳ್ಳಿಗಳ ಉದ್ಧಾರ ಹಾಗೂ ರಾಮ ರಾಜ್ಯದ ಕನಸು ನನಸು ಮಾಡಲು ಯುವಕರು ಮನಸ್ಸು ಮಾಡಬೇಕು ಎಂದು ಕಿವಿಮಾತು ಹೇಳಿದರು. ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಡಾ.ಐ.ಎಂ.ಮೋಹನ್, ಕೃಷ್ಣೇಗೌಡ, ಆನಂದಸ್ವಾಮಿ, ರಮೇಶ್ ಇದ್ದರು.