ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಕ್ರಮ ಕಲ್ಲು ಸಾಗಾಟ: ಚಾಲಕ ಬಂಧನ

Rashmi Kasaragodu
Updated On : 8 Oct 2013, 11:07 am

ಜಾವಗಲ್: ಜಾವಗಲ್ ಹೋಬಳಿ ಬಂದೂರು ಸಮೀಪ ಅಕ್ರಮವಾಗಿ ಸಾಗಿಸುತ್ತಿದ್ದ ಸೈಜು ಕಲ್ಲುಗಳನ್ನು ವಾಹನ ಸಹಿತ ವಶ ಪಡಿಸಿಕೊಂಡಿರುವ ಪೊಲೀಸರು ಟ್ಯಾಕ್ಟರ್ ಚಾಲಕ ದಯಾನಂದ್ ಎಂಬಾತನನ್ನು ಬಂಧಿಸಿರುವ ಘಟನೆ ಇತ್ತೀಚೆಗೆ ನಡೆದಿದೆ.
ಜಾವಗಲ್-ಉಂಡಿಗನಾಳು ಮಾರ್ಗವಾಗಿ ಜಾವಗಲ್ ಪೊಲೀಸ್ ಠಾಣಾಧಿಕಾರಿ ನವೀನ್ ಮತ್ತು ಸಿಬ್ಬಂದಿ ವರ್ಗದ ಮಲ್ಲೇಶ್, ಅಮೃತೇಶ್, ಗಿರೀಶ್ ಕರಗುಂದಕ್ಕೆ ಹೋಗುತ್ತಿದ್ದಾಗ ಅಪ್ಪಿಹಳ್ಳಿ ನಂದೀಶ, ಅರಕೆರೆ ರಾಜು ಚಾಲಕ ದಯಾನಂದ್ ನೊಂದಿಗೆ ಪರವಾನಗಿ ಇಲ್ಲದೆ ಸುಮಾರು 300 ಸೈಜು ಕಲ್ಲುಗಳನ್ನು ಸಾಗಿಸುತ್ತಿದ್ದರು.   ಇದನ್ನು ಕಂಡ ಪೊಲೀಸ್ ಸಿಬ್ಬಂದಿ  ಡೆದು ವಿಚಾರಿಸಿದಾಗ ಇಬ್ಬರು ಪರಾರಿಯಾಗಿದ್ದು, ದಯಾನಂದನನ್ನು ಬಂಧಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement