ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಎಸ್ಬಿಎಂ ಶತಮಾನೋತ್ಸವ ಆಚರಣೆ

Rashmi Kasaragodu
Updated On : 8 Oct 2013, 11:07 am

ಹಾಸನ: ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಹಾಸನ ಕೃಷಿ ಅಭಿವೃದ್ಧಿ ಶಾಖೆ ವತಿಯಿಂದ ಇತ್ತೀಚೆಗೆ ಶಾಖೆಯ ಆವರಣದಲ್ಲಿ ಎಸ್ಬಿಎಂ ಬ್ಯಾಂಕ್ ಶತಮಾನೋತ್ಸವ ಆಚರಿಸಲಾಯಿತು.
ಮೈಸೂರು ಬ್ಯಾಂಕ್ ಪ್ರಾದೇಶಿಕ ಕಚೇರಿ ಸಹಾಯಕ ಪ್ರಧಾನ ವ್ಯವಸ್ಥಾಪಕ ಭುವನೇಂದ್ರ ಠಾಕೂರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 1913ರ ಅ.2 ರಂದು  ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು  ಸರ್ ಎಂ. ವಿಶ್ವೇಶ್ವರಯ್ಯ ಅವರ ಪ್ರೇರಣೆಯಿಂದ  ಆರಂಭವಾದ ಮೈಸೂರು ಬ್ಯಾಂಕ್ಗೆ  ಈಗ ಶತಮಾನದ ಸಂಭ್ರಮ ಎಂದು  ಹೇಳಿದರು. ಶ್ರೀನಿವಾಸ್ ಅಕ್ಟೋಬರ್ 2 ರ ಮಹತ್ವ ತಿಳಿಸಿ, ಮಹಾತ್ಮ ಗಾಂಧಿ ಹಾಗೂ ಶಾಸ್ತ್ರೀ ಅವರನ್ನು ಸ್ಮರಿಸಿದರು.  ವೈದ್ಯ ದೊಡ್ಡೇಗೌಡ, ಗುತ್ತಿಗೆದಾರ ಚಂದ್ರಶೇಖರ್, ಕಾಫಿ ಬೆಳೆಗಾರ ಮಲ್ಲಿಕಾರ್ಜುನ್, ನೂರಾರು ಗ್ರಾಹಕರು ಉಪಸ್ಥಿತರಿದ್ದರು.


ಮೋದಿ ಪ್ರಧಾನಿ ಅಭ್ಯರ್ಥಿ; 'ಕೈ' ನಡುಕ: ಬಿಜೆಪಿ ವ್ಯಂಗ್ಯ


ಬೇಲೂರು: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ದೇಶದ ಮುಂದಿನ ಪ್ರಧಾನಿ ಎಂದು ಬಿಂಬಿತವಾದ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ಕೇಂದ್ರದ ಕಾಂಗ್ರೆಸ್ ಮುಖಂಡರಿಗೆ ನಡುಕ ಶುರುವಾಗಿದ್ದು ದೇಶದ ಯುವ ಜನತೆಯಲ್ಲಿ ಮೋದಿಯ ಬಗ್ಗೆ ಹೆಚ್ಚಿನ ಆಸಕ್ತಿ ಹೆಚ್ಚುತ್ತಿದ್ದು ಇದು ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ವರದಾನವಾಗಲಿದೆ ಎಂದು ಲೋಕಸಭಾ ಚುನಾವಣಾ ಉಸ್ತುವಾರಿ ಪ್ರಾಣೇಶ್ ಅಭಿಪ್ರಾಯಪಟ್ಟರು.
ಇಲ್ಲಿನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬೂತ್ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೇಂದ್ರ ಸರ್ಕಾರದ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದರು.
ಯುವ ಸಮೂಹದ ಬೆಂಬಲ ಪೂರ: ಮೋದಿ ಪ್ರಧಾನಿ ಆಗುವ ಆಶಯ ವ್ಯಕ್ತಪಡಿಸಿ ದೇಶದ ಯುವ ಸಮೂಹವೇ ಬೆಂಬಲವನ್ನು ವ್ಯಕ್ತಪಡಿಸುತ್ತಿದೆ. ಕಾಂಗ್ರೆಸ್ ನೇತೃತ್ವದಕೇಂದ್ರ ಸರ್ಕಾರದ ಭ್ರಷ್ಟ ಆಡಳಿತದ ಬಗ್ಗೆ ಜನತೆ ರೋಸಿಹೋಗಿದ್ದಾರೆ.  ಇಂತಹ ಸಮಯದಲ್ಲಿ ಶಕ್ತಿಕೇಂದ್ರ ಹಾಗೂ ಇತರೆ ಬಿಜೆಪಿ ಕಾರ್ಯಕರ್ತರು ಕೈ ಕಟ್ಟಿಕೂರದೆ ಸಂಘಟನೆಯ ಮಂತ್ರವನ್ನು ಜಪಿಸಬೇಕಿದೆ. ಯುವ ಸಮೂಹ ಹಾಗೂ ಮತದಾರರ ಮನೆ ಮನಗಳನ್ನು ಮುಟ್ಟುವ ಮೂಲಕ ಮೋದಿ ಪ್ರಧಾನಿ ಆಗುವ ದಾರಿ ಸುಗುಮ ಗೊಳಿಸಬೇಕಿದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಬೆಣ್ಣೂರು ರೇಣುಕುಮಾರ್ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಅಶ್ವತನಾರಾಯಣ ಹಾಗೂ ಪ್ರಾಣೇಶ್ ಅವರಿಗೆ   ಚುನಾವಣಾ ಉಸ್ತುವಾರಿ ಜವಾಬ್ಧಾರಿ ವಹಿಸಲಾಗಿದೆ.  ಈಗಾಗಲೇ ಕೇಂದ್ರ ಸರ್ಕಾರದ ಕೆಟ್ಟ ಆಡಳಿತಕ್ಕೆ ಸಾಕ್ಷಿಯಾಗಿ ದೇಶದ ಬಡವರು, ರೈತರು, ಯುವಕರು ಪರದಾಡುವಂತಾಗಿದೆ. ಪಕ್ಷಾತೀತವಾಗಿ ಎಲ್ಲರೂ ಮೋದಿಯ ಬಗ್ಗೆ ಮೆಚ್ಚುಗೆ ಮಾತು ಆಡುತ್ತಿದ್ದು ಈ ಬಾರಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಎ.ಎಸ್.ಆನಂದ್, ಪ್ರಧಾನ ಕಾರ್ಯದರ್ಶಿ ಪೂರ್ಣೇಶ್, ನವಿಲೆ ಅಣ್ಣಪ್ಪ, ಜಿ.ಪಂ ಸದಸ್ಯರಾದ ಲಕ್ಷ್ಮಣ್, ಜಯಶೀಲಾ ಜಯಶಂಕರ್, ತಾಪಂ ಸದಸ್ಯ ಪರ್ವತಯ್ಯ, ಶೇಖರಯ್ಯ, ಬಿಜೆಪಿ ಮುಖಂಡರಾದ ಜಿ.ಕೆ. ಕುಮಾರ್, ಅಭಿಗೌಡ, ಹಾಲಪ್ಪಶೆಟ್ಟಿ, ಗೋವಿಂದಪ್ಪ, ಶ್ರೀನಿವಾಸ್, ರೇಣುಕಾನಂದ, ವಿಜಯಲಕ್ಷ್ಮಿ, ನಳಿನಾ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.  



ಹಾಸ್ಯ ಲೇಖನ ಆಹ್ವಾನ
ಹಾಸನ: ಬೆಂಗಳೂರಿನ ಹಾಸ್ಯ ದರ್ಶನ ಮಾಸಪತ್ರಿಕೆ ಹಾಸ್ಯ ಲೇಖಕರಿಂದ ಕೋ.ಲ.ರಂಗನಾಥ ರಾವ್ ಹಾಸ್ಯ ಲೇಖನ ಸ್ಪರ್ಧೆಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಲೇಖನಗಳು ಸ್ವಂತ ರಚನೆ ಯಾಗಿರಬೇಕು. ಎಲ್ಲಿಯೂ ಪ್ರಕಟ ವಾಗಿರಬಾರದು. ಪ್ರಥಮ ಬಹುಮಾನ ರು. 500 , ದ್ವಿತೀಯ ಬಹುಮಾನ ರು. 300, ಹಾಗೂ ತೃತೀಯ ಬಹುಮಾನ ರು. 200   ನೀಡಲಾಗುವುದು. ಲೇಖನಗಳನ್ನು ಅ.31 ರೊಳಗೆ ಸಂಪಾದಕರು, ಹಾಸ್ಯ ದರ್ಶನ ಮಾಸ ಪತ್ರಿಕೆ, ನಂ.249, ಪದ್ಮಾಲಯ, 5ನೇ ಬಿ ಮುಖ್ಯ ರಸ್ತೆ, ಕಲ್ಯಾಣನಗರ, 2 ನೇ ಹಂತ, ಬೆಂಗಳೂರು-43 ಇವರಿಗೆ ಕಳುಹಿಸುವಂತೆ ಪ್ರಕಟಣೆ ಕೋರಿದೆ.
ಹಿಂದಿ ಕಾರ್ಯಕ್ರಮ
ನಗರದ ಕೇಂದ್ರೀಯ ವಿದ್ಯಾಲಯದಲ್ಲಿ ಹಿಂದಿ ಪಖವಾಡಾ ಕಾರ್ಯಕ್ರಮ ನೆರವೇರಿತು. ನಗರದ ಆಯುರ್ವೇದ ಮಹಾವಿದ್ಯಾಲಯದ ಡಾ. ಅವನೀಶ ಪಾಠಕ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ದಕ್ಷಿಣೋತ್ತರ ರಾಜ್ಯಗಳಲ್ಲಿ ಸುಗಮವಾಗಿ ಸಂಪರ್ಕಿಸಲು ಹಿಂದಿ ಭಾಷೆ ಪ್ರಮುಖ ಪಾತ್ರ ವಹಿಸಿದೆ ಎಂದು ಅಭಿಪ್ರಾಯಪಟ್ಟರು. ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ  ವೈ.ಜಿ.ಪಾಟೀಲ ಹಿಂದಿ ಭಾಷೆಯ ಹಿರಿಮೆ, ಗರಿಮೆಗಳನ್ನು ತಿಳಿಸಿ, ಕಲಿಯಲು ಸುಲಭವಾದ ಭಾಷೆಯೆಂದು ಕಿವಿಮಾತು ಹೇಳಿದರು. ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪುರಸ್ಕಾರ ನೀಡಲಾಯಿತು. ವಿ.ವಿ.ಭಟ್ಟರು ಸ್ವಾಗತಿಸಿದರು. ವಾಜಿದ ಖಾನ ವಂದಿಸಿದರು. ಕು.ಶೃತಿಪಾಟೀಲ  ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement