ಕೊಬ್ಬರಿ ಬೆಲೆ ಏರಿಕೆ
ಜಾವಗಲ್: ಜಾವಗಲ್ ಸಂತೆಯಲ್ಲಿ ಮಂಗಳವಾರ ಕೊಬ್ಬರಿಬೆಲೆ ರು. 6,150 ನಿಂದ 6,200 ವರೆಗೆ ಏರಿಕೆಯಾಗಿದ್ದು ಬೆಳೆಗಾರರಿಗೆ ಸಂತಸ ತಂದಿದೆ.
ನ್ಯಾಫೆಡ್ ಕೊಬ್ಬರಿ ಮಾರಾಟವನ್ನು ಕಳೆದವಾರ ನಿಲ್ಲಿಸಿದ್ದರಿಂದ ಮಾರುಕಟ್ಟೆಯಲ್ಲಿ ರು.5,500 ಗಳಿತ್ತು. ಈ ವಾರ ಕೊಬ್ಬರಿ ಬೆಲೆ ಕಳೆದ ವಾರಕ್ಕಿಂತ ರು.600 ನಿಂದ 700 ಏರಿಕೆಯಾಗಿದ್ದು ಬೆಳೆಗಾರರಿಗೆ ಖುಷಿ ನೀಡಿತು. ನ್ಯಾಫೆಡ್ ಕೇಂದ್ರಕ್ಕೆ ಕೊಬ್ಬರಿ ಬಿಡಲು ಹಲವು ನಿಬಂಧನೆಗಳಿದ್ದು, ಮಾರುಕಟ್ಟೆಯಲ್ಲಿ ಇಂದಿನ ಧಾರಣೆ ಇದ್ದಲ್ಲಿ ರೈತರು ಸುಲಭವಾಗಿ ಕೊಬ್ಬರಿ ಮಾರಾಟಮಾಡಲು ಅನುಕೂಲವಾಗುತ್ತದೆ ಎಂಬ ಅಭಿಪ್ರಾಯವ್ಯಕ್ತವಾಗಿದೆ. ಈರುಳ್ಳಿ ಬೆಲೆ 1ಕೆ.ಜಿಗೆ ರು. 20-25 ಮೂಲಂಗಿ ರು. 40 ಕ್ಯಾರೆಟ್ ರು. 40 ಗಳಾಗಿತ್ತು. ಮಂಗಳವಾರದಿಂದ ಪ್ರಾರಂಭವಾಗುವ ಹಿರಿಯರ ಹಬ್ಬದ ಪ್ರಯುಕ್ತ ಸಂತೆಗೆಬಂದಿದ್ದ ಕುರಿ ಮತ್ತು ಟಗರುಗಳ ಬೆಲೆ 1ಕ್ಕೆ ಸುಮಾರು ರು.10,000 ನಿಂದ ರು11,000 ವರೆಗೆ ಮಾರಾಟವಾಗುತ್ತಿತ್ತು.