ತಹಸೀಲ್ದಾರ್ ವಿರುದ್ಧ ಅಬ್ಬರಿಸಿದ ಶಾಸಕರು...
ಹಾಸನ: ಮರಳು ಸಾಗಾಣಿಕೆ ಬಗ್ಗೆ ಹಾಸನ ತಹಸೀಲ್ದಾರ್ ವಿರುದ್ಧ ಜೆಡಿಎಸ್ ಶಾಸಕರು ಮುಖ್ಯಮಂತ್ರಿ ಎದುರೇ ಅಬ್ಬರಿಸಿದ ಘಟನೆ ಮಂಗಳವಾರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆಯಿತು.
ಮೊದಲಿಗೆ ಮಾತನಾಡಿದ ಶಾಸಕ ಎಚ್.ಎಸ್. ಪ್ರಕಾಶ್, ಹಾಸನ ತಾಲೂಕು ತಹಸೀಲ್ದಾರ್ ವಿನಾಕಾರಣ ಮರಳು ಸಾಗಾಣಿಕೆ ವಿಚಾರವಾಗಿ ತಪ್ಪು ಹೇಳಿಕೆ ನೀಡಿಕೆ ನೀಡಿ ಅವಮಾನ ಮಾಡಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ನಾನು ಡಿಸಿಯವರೆಗೆ ಅಕ್ರಮ ಮರಳು ಸಾಗಾಣಿಕೆ ಮಾಡುವವರನ್ನು ಬಿಡಿ ಎಂದು ಹೇಳಿದ್ದೇನೆಯೇ ತಿಳಿಸಿ ಎಂದು ಆಗ್ರಹಿಸಿದರು. ಆಗ ಮಾತನಾಡಿದ ಡಿಸಿ ಅನ್ಬುಕುಮಾರ್ ಅವರು. ಇಲ್ಲಾ ಸಾರ್. ಇಲ್ಲಾ... 4 ಸಾವಿರ ಲೋಡ್ ಮರಳು ದಾಸ್ತಾನು ಮಾಡಲಾಗಿದೆ. ಅದನ್ನು ಹರಾಜು ಹಾಕಿದರೆ ಸರ್ಕಾರಕ್ಕೆ ಹಣ ಬರುತ್ತದೆ. ಹಾಗೇ ಮಾಡದೇ ಅಕ್ರಮ ಮರಳು ದಂಧೆಗೆ ಅವಕಾಶ ನೀಡುವುದು ಸರಿಯಲ್ಲ ಎಂದು ಹೇಳಿದರು. ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಎಚ್.ಕೆ. ಕುಮಾರಸ್ವಾಮಿ ಮತ್ತು ಎ.ಮಂಜು ಗುಡುಗಿದರು.
ಇಂದು ಜಿಪಂ ಸಾಮಾನ್ಯ ಸಭೆ
ಹಾಸನ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಡಿ.ಜಿ. ಅಂಬಿಕಾ ರಾಮಣ್ಣ ಅಧ್ಯಕ್ಷತೆಯಲ್ಲಿ ಅ.9 ರಂದು ಬೆಳಗ್ಗೆ 11 ಕ್ಕೆ ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಲಿದೆ ಎಂದು ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.
ತಾಪಂ ಸಾಮಾನ್ಯ ಸಭೆ
ಹಾಸನ: ತಾಪಂ ಅಧ್ಯಕ್ಷೆ .ರತ್ನ ಹನುಮೇಗೌಡ ಅಧ್ಯಕ್ಷತೆಯಲ್ಲಿ ಅ. 9ರಂದು ಬೆಳಗ್ಗೆ 11ಕ್ಕೆ ತಾಪಂ ಸಭಾಂಗಣದಲ್ಲಿ ಸಭೆ ನಡೆಯಲಿದೆ ಎಂದು ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.