ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ದಸರಾ ಬೊಂಬೆ ನಿನ್ನನ್ನು ನೋಡಲು...

Rashmi Kasaragodu
Updated On : 8 Oct 2013, 11:11 am

ಹಾಸನ: ದಸರಾ ಬೊಂಬೆ ಎಂದರೆ ಯಾರು ನೋಡಿದರೂ ಮನಸಿಗೆ ಮುದ ನೀಡುತ್ತವೆ. ಆದೇ ರೀತಿ  ನಗರದ ಉತ್ತರ ಬಡಾವಣೆಯ  ವಾಸಿ ಹೆಚ್.ಎಸ್.ಬಿ. ಪ್ರಸಾದ್ ಪುತ್ರರು ಪ್ರತಿಷ್ಠಾಪಿಸಿರುವ ದಸರಾ ಬೊಂಬೆಗಳು ನೋಡಗರನ್ನು ಆಕರ್ಷಿಸುತ್ತಿವೆ.
ಈ ಕುಟುಂಬ ನಾಲ್ಕು ತಲೆ ಮಾರಿನಿಂದ ಬೊಂಬೆ ಇಡುವ ಪದ್ಧತಿ ಬೆಳೆಸಿಕೊಂಡು ಬಂದಿದೆ. ಆನೆ ಸಾಲು, ಜಿಂಕೆ ಸಾಲು, ನರ್ತಕಿಯರು, ಗಣಪತಿ, ನವ ದುರ್ಗಿಯರು, ಹೂವು, ಪ್ರಾಣಿಗಳು ಸೇರಿದಂತೆ ಮರಳಿನಿಂದ ತಯಾರಿಸಿದ ಚಿತ್ರ ಎಲ್ಲಾವು ಮನ ಸೆಳೆಯುತ್ತಿವೆ.ಎಲ್ಲರ ಗಮನ ಸೆಳೆಯುವ ಬೊಂಬೆ: 9 ದಿನ ಇಡುವ ಈ ದಸರ ಬೊಂಬೆ ನೋಡಲು ಮಕ್ಕಳು ದೊಡ್ಡವರು ಎಲ್ಲರೂ  ಬಂದು ಹೋಗುತ್ತಿದ್ದಾರೆ. ಯಾರೆ ಮನೆಗೆ ಬಂದರೂ ಅವರಿಗೆ ತಿನಿಸುಗಳನ್ನು ನೀಡಿ ಸತ್ಕರಿಸುವುದು  ಸಂಪ್ರದಾಯವಾಗಿದೆ.  ದಸರಾ ಬೊಂಬೆಗಳನ್ನು ವೀಕ್ಷಿಸಬೇಕೆಂಬ ಆಸಕ್ತರು    ವಕೀಲ ದಿ .ವೆಂಕಟೇಶಮೂರ್ತಿ ಅವರ ಮನೆ ಬಳಿ ಇರುವ  ಪ್ರಸಾದ್ ಅವರ ಮನೆ ನಂ. 1048, ಉತ್ತರ ಬಡಾವಣೆ ಇಲ್ಲಿಗೆ ತೆರಳಬಹುದು.


'ಸತ್ಯ, ಅಹಿಂಸೆ-ಸರಳತೆ ಅಳವಡಿಸಿಕೊಂಡಲ್ಲಿ ಬದುಕು ಸುಂದರ'


ಆಲೂರು: ಪ್ರತಿಯೊಬ್ಬರೂ ಜೀವನದಲ್ಲಿ ಸತ್ಯ, ಅಹಿಂಸೆ, ಸರಳತೆ ಅಳವಡಿಸಿಕೊಂಡು ಗಾಂಧೀಜಿ ತತ್ವ-ಸಿದ್ಧಾಂತ, ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು ಎಂದು ತಾಪಂ  ಸದಸ್ಯೆ ರೇಣುಕ ಅಭಿಪ್ರಾಯಪಟ್ಟರು.
ಕಸಬಾ ಕವಳಿಕೆರೆ ಗ್ರಾಮದಲ್ಲಿ ಗಾಂಧಿ ಜಯಂತಿ ಅಂಗವಾಗಿ ಇತ್ತೀಚೆಗೆ ಏರ್ಪಡಿಸಿದ್ದ ಶ್ರಮದಾನ ಮತ್ತು ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಒಕ್ಕೂಟದ ಅಧ್ಯಕ್ಷೆ ನಳಿನಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮೇಲ್ವಿಚಾರಕ ಹಾಲಪ್ಪ, ಆಂತರಿಕ ಲೆಕ್ಕ ಪರಿಶೋಧನಾಧಿಕಾರಿ ಲಕ್ಷ್ಮಣ್, ಸೇವಾ ಪ್ರತಿನಿಧಿಗಳಾದ ರೇಣುಕ, ಭಾಗೀರಥಿ, ಪವಿತ್ರ ಭಾಗವಹಿಸಿದ್ದರು.ಆರೋಗ್ಯಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಸುರಕ್ಷಾ, ಸದಸ್ಯರ ಜೀವನದ ಬಗ್ಗೆ ಭದ್ರತೆ ನೀಡುವ ಜೀವನ ಮಧುರ, ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಸುಜ್ಞಾನ ನಿಧಿ ಯೋಜನೆ, ದುಶ್ಚಟ ಹೋಗ ಲಾಡಿಸುವ ಮದ್ಯ ವರ್ಜನ ಶಿಬಿರ ನಡೆಸಲಾಗುವುದು ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement