ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಧಿಕಾರಿಗಳು ಗೈರು: ಜನಸ್ಪಂದನಾ ಸಭೆ ಅರ್ಧಕ್ಕೆ ಮೊಟಕು

Rashmi Kasaragodu
Updated On : 10 Oct 2013, 12:28 pm

ಸಕಲೇಶಪುರ: ಎಲ್ಲಾ ಇಲಾಖೆಗಳ ಅಧಿಕಾರಿಗಳು ಜನಸ್ಪಂದನಾ ಸಭೆಯಲ್ಲಿ ಭಾಗವಹಿಸಿಲ್ಲ ಎಂದು ಸಾರ್ವಜನಿಕರು ಆಕ್ಷೇಪಿಸಿ ಸಭೆಯನ್ನು ನಡೆಸಬಾರದು ಎಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಯಸಳೂರು ಗ್ರಾಮ ಪಂಚಾಯ್ತಿಯಲ್ಲಿ ನಡೆಯುತ್ತಿದ್ದ ಜನಸ್ಪಂದನಾ ಸಭೆಯನ್ನು ಅರ್ಧಕ್ಕೆ ಮೊಟುಕುಗೊಳಿಸಿ ಸಭೆಯನ್ನು ರದ್ದು ಪಡಿಸಿದ ಪ್ರಸಂಗ ನಡೆಯಿತು.
ಯಸಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ದೇವೇಂದ್ರ ಅಧ್ಯಕ್ಷತೆಯಲ್ಲಿ ಜನಸ್ಪಂದನಾ ಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ತಹಸೀಲ್ದಾರ್ ಪುಟ್ಟಶೆಟ್ಟಿ ಸಬ್ರಿಜಿಸ್ಟ್ರಾರ್ ಸಿಡಿಪಿಓ ಸೇರಿದಂತೆ ಕೆಲವೇ ಅಧಿಕಾರಿಗಳು ಮಾತ್ರ ಭಾಗವಹಿಸಿದ್ದರು.
ಇದರಿಂದ ಕುಪಿತರಾದ ಜನತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಈ ಸಭೆಯಲ್ಲಿ ಹಾಜರಿರಬೇಕು. ಹಲವಾರು ಸಮಸ್ಯೆಗಳಿದ್ದು ಅಹವಾಲು ಸಲ್ಲಿಸಿ ಇತ್ಯರ್ಥಗೊಳಿಸಿ ಕೊಳ್ಳಬೇಕಾಗಿದೆ. ಕೇವಲ ನಾಲ್ಕೈದು ಅಧಿಕಾರಿಗಳು ಮಾತ್ರ ಭಾಗವಹಿಸಿದರೆ ಉಳಿದ ಇಲಾಖೆ ಸಂಬಂಧಿತ ನರ ಸಮಸ್ಯೆ ಹೇಗೆ ಬಗೆಹರಿಸಲು ಸಾಧ್ಯ. ಗೈರು ಹಾಜರಾಗಿರುವ ಅಧಿಕಾರಿಗಳನ್ನು ಸಭೆಗೆ ತಕ್ಷಣ ಕರೆಸಬೇಕು. ಇಲ್ಲವೇ ಈ ಸಭೆಯನ್ನು ರದ್ದುಗೊಳಿಸಿ  ಮತ್ತೊಂದು ದಿನಾಂಕ ನಿಗದಿ ಮಾಡಿ ಪ್ರತಿ ಅಧಿಕಾರಿ ಕಡ್ಡಾಯವಾಗಿ ಭಾಗವಹಿಸಲು ಸೂಚಿಸಬೇಕು ಎಂದು ಪಟ್ಟು ಹಿಡಿದರು. ಇಂದಿನ ಸಭೆಯನ್ನು ನಾವು ನಡೆಸಲು ಬಿಡುವುದಿಲ್ಲ ಎಂದು ಹೇಳಿದಾಗ ಜನರ ಒತ್ತಾಯದಂತೆ ಅಧ್ಯಕ್ಷರು ಸಭೆಯನ್ನು ರದ್ದುಗೊಳಿಸಿ ಮುಂದಿನ ಸಭೆಯನ್ನು ನಿಗದಿಗೊಳಿಸಿ ವಿಷಯ ತಿಳಿಸುವುದಾಗಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement