ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾರು ಬೈಕ್ ಡಿಕ್ಕಿ: ಇಬ್ಬರ ಸಾವು

Rashmi Kasaragodu
Updated On : 10 Oct 2013, 12:30 pm

ಅರಸೀಕೆರೆ: ಮಾರುತಿ ಕಾರು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಬೈಕ್ನಲ್ಲಿದ್ದ ಇಬ್ಬರು ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ.  ಗಂಡಸಿ ಹೋಬಳಿಯ ಮುದುಡಿ ರಘು (30) ಮತ್ತು ಪ್ರಕಾಶ್ (40) ಸಾವನ್ನಪ್ಪಿದ್ದ ದುರ್ದೈವಿಗಳು.
 ರಘು ಪ್ರಕಾಶ ಗಂಡಸಿಗೆ ಹೋಗಲು ರಘು ಅವರ ಬಜಾಜ್ ಬೈಕಿನಲ್ಲಿ ಅರಸೀಕೆರೆ-ಚನ್ನರಾಯಪಟ್ಟಣ ರಸ್ತೆ, ಬಾರೇಹಳ್ಳಿ ಗೇಟ್ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಮಾರುತಿ ಜಿನ್ ಕಾರು ಚಾಲಕನ ನಿರ್ಲಕ್ಷ್ಯತೆಯಿಂದ ಡಿಕ್ಕಿ ಪರಿಣಾಮ ಮೃತಪಟ್ಟಿದ್ದಾರೆ.ಪ್ರತ್ಯಕ್ಷದರ್ಶಿ ಶಿವಕುಮಾರ್ ಗಂಡಸಿ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬೈಕ್ ಡಿಕ್ಕಿ: ವ್ಯಕ್ತಿ ಸಾವು
ಚನ್ನರಾಯಪಟ್ಟಣ: ಬೈಕ್ ಡಿಕ್ಕಿ ಪರಿಣಾಮ ಪಟ್ಟಣದ ಅರಳೇಪೇಟೆ ರಾಜವೀರ್ಸಿಂಗ್ (50) ಸಾವನ್ನಪ್ಪಿದ್ದಾರೆ. ರಾಜವೀರಸಿಂಗ್ ನಡೆದು ಹೋಗುತ್ತಿದ್ದಾಗ  ಹಿಂಬದಿಯಿಂದ ಬಂದ ಬೈಕ್ ಚಾಲಕನ ನಿರ್ಲಕ್ಷ್ಯತೆಯಿಂದ  ಡಿಕ್ಕಿ ಮಾಡಿದ ಪರಿಣಾಮ ತೀವ್ರ ಗಾಯವಾಗಿದ್ದು, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯೆ ರಾಜವೀರ್ಸಿಂಗ್ ಅವರುಮೃತಪಟ್ಟಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement