ಜೇನುಹುಳ ಕಡಿತ ವ್ಯಕ್ತಿ ಅಸ್ವಸ್ಥ
ಸಕಲೇಶಪುರ: ಜೇನುಹುಳು ಕಡಿತಕ್ಕೆ ವ್ಯಕ್ತಿಯೊಬ್ಬರು ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ನಾಗರ ಗ್ರಾಮದಲ್ಲಿ ಬುಧವಾರ ನಡೆದಿದೆ. ಗ್ರಾಮದ ಅಲ್ಬರ್ ಸ್ಟೇಗಸ್ (60) ಅಸ್ವಸ್ಥಗೊಂಡವರು. ಗ್ರಾಮ ಸಮೀಪದ ದಿಣ್ಣೆಯಲ್ಲಿ ಜಾನುವಾರುಗಳನ್ನು ಮೇಯಿಸುತ್ತಿದ್ದ ಸಂದರ್ಭದಲ್ಲಿ ಜೇನುಹುಳುಗಳು ದಾಳಿ ನಡೆಸಿದ್ದರಿಂದ ತೀವ್ರಸ್ವರೂಪದಲ್ಲಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.