ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಯೋಗಶಿಕ್ಷಣ ಶಾಲೆಯಲ್ಲಿ ಗಾಂಧಿ, ಶಾಸ್ತ್ರೀ ಜನ್ಮದಿನಾಚರಣೆ

Rashmi Kasaragodu
Updated On : 10 Oct 2013, 12:30 pm

ಹಾಸನ: ನಗರದ  ವಿವೇಕಾನಂದ ಯೋಗ ಶಿಕ್ಷಣಶಾಲೆಯಲ್ಲಿ  ಗಾಂಧಿಜಯಂತಿ ಮತ್ತು ಶಾಸ್ತ್ರೀ ಜನ್ಮದಿನಾಚರಣೆ ಆಚರಿಸಲಾಯಿತು. ಯೋಗಶಿಕ್ಷಕ ಎಚ್.ಬಿ. ರಮೇಶ್ ಮಾತನಾಡಿ, ರಾಷ್ಟ್ರಪಿತ ಗಾಂಧೀಜಿ ತಮ್ಮ ಸಂಕಲ್ಪಬಲದಿಂದ ಸತ್ಯ,  ಅಹಿಂಸೆಗಳನ್ನು ಜೀವಿತದ ಕೊನೆಯವರೆಗೂ ಪಾಲಿಸಿ, ಜನರಿಗೆ ಅದರ ಮನವರಿಕೆ ಮಾಡಿ  ಅದರ ಮೂಲಕವೇ ಸ್ವಾತಂತ್ರ್ಯಗಳಿಸಲು ಪ್ರಮುಖಪಾತ್ರ ವಹಿಸಿದರು ಎಂದು ಹೇಳಿದರು. ಲೇಖಕ ಗೊರೂರು ಶಿವೇಶ್ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್   ಅಧ್ಯಕ್ಷ  ಡಾ ಜನಾರ್ದನ್ ಮಾತನಾಡಿ,  ಗಾಂಧೀಜಿತತ್ವ ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅವುಗಳನ್ನು  ಅಳವಡಿಸಿಕೊಳ್ಳುವುದರ ಮೂಲಕ ಗಾಂಧೀಜಿ ಮತ್ತು ಶಾಸ್ತ್ರಿಯವರು ಹಾಕಿಕೊಟ್ಟ ಹಾದಿಯಲ್ಲಿ  ನಡೆಯುವ ಪ್ರಯತ್ನ ಮಾಡೋಣ ಎಂದು ತಿಳಿಸಿದರು.  ಸರ್ವಧರ್ಮ ಪ್ರಾರ್ಥನೆ ನಡೆಯಿತು. ಯೋಗಶಾಲೆಯ ಹಿರಿಯರಾದ ಚಂಗಪ್ಪ,  ಧರ್ಮಪ್ಪ, ಪುಟ್ಟಪ್ಪ, ಚಂದ್ರೇಗೌಡ, ರಾಮಣ್ಣ, ಚಂದ್ರ, ಆನಂದ್, ಸುರೇಶ್, ಮದಕರಿನಾಯಕ, ಮಂಜುನಾಥ್ ಶೈಲಜಾ, ಶ್ಯಮಂತಕಮಣಿ,  ಗಿರಿಜ ಇತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement