ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಂಶೋಧನಾ ವಿದ್ಯಾರ್ಥಿಗೆ ಲ್ಯಾಪ್ಟಾಪ್; ವಾಗ್ವಾದ

Rashmi Kasaragodu
Updated On : 10 Oct 2013, 12:28 pm

ಕನ್ನಡಪ್ರಭ ವಾರ್ತೆ೤ ಹಾಸನ೤ ಅ. 9
ಉನ್ನತ ಶಿಕ್ಷಣ (ಸಂಶೋಧನಾ ವಿದ್ಯಾರ್ಥಿ) ಪಡೆಯುತ್ತಿರುವಂತಹ ವಿದ್ಯಾರ್ಥಿಗೆ ಲ್ಯಾಪ್ಟಾಪ್ ನೀಡುವ ಬಗ್ಗೆ ವಾದ-ವಿವಾದ ಬುಧವಾರ ಶಾಸಕ ಎಚ್.ಎಸ್. ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಸದಸ್ಯ ಯಶವಂತ್ ಅವರು ವಿದ್ಯಾರ್ಥಿನಿಗೆ ಲ್ಯಾಪ್ಟಾಪ್ನ್ನು ನೀಡಬೇಕು ಎಂದರೆ, ಅನಿಲ್ಕುಮಾರ್ ಇತರರು ಕೇವಲ ಎಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವಂತಹ ಬಡ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ನೀಡುವಂತಿದೆ. ಆದ್ದರಿಂದ ಸಂಶೋಧನೆ ನಡೆಯುತ್ತಿರುವ ವಿದ್ಯಾರ್ಥಿಗೆ ಲ್ಯಾಪ್ ಲ್ಯಾಪ್ ನೀಡುವುದಾದರೆ ಇತರೆ ಬಡ ವಿದ್ಯಾರ್ಥಿಗಳಿದ್ದು, ಅವರಿಗೂ ಈ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು.
ಸದಸ್ಯೆ ನೇತ್ರಾವತಿ ಗಿರೀಶ್ ಮಾತನಾಡಿ, ಪರಿಶಿಷ್ಟ ಜಾತಿಯ ಸೌಮ್ಯ ಎಂಬ ವಿದ್ಯಾರ್ಥಿನಿ ಪಿಎಚ್ಡಿ ವ್ಯಾಸಂಗಕ್ಕೆ ಆರ್ಥಿಕ ಸಹಾಯ ಕೋರಿದ್ದರೆ ಅಧಿಕಾರಿಗಳು ಲ್ಯಾಪ್ಟ್ಯಾಪ್ ಸಹಾಯ ಅಂತಹ ಮಾಡಿದ್ದಾರೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿ ಶಾಸಕ ಎಚ್.ಎಸ್.ಪ್ರಕಾಶ್, ಲ್ಯಾಪ್ಟಾಪ್ ನೀಡುವುದು ಹಾಗೂ ಟೇಬಲ್ಗಳನ್ನು ನೀಡುವುದು ಸದಸ್ಯರಿಗೆ ಬಿಟ್ಟ ವಿಚಾರ, ಆದ್ದರಿಂದ ಕೊಡಿ ಅಂತ ಹೇಳಿದರು ನೀಡುತ್ತೇವೆ ಎಂದು ನುಡಿದರು.
ಮೊಬೈಲ್ ನೀಡುವ ಬಗ್ಗೆ ವಾದ: ಅಧ್ಯಕ್ಷರು, ಉಪಾಧ್ಯಕ್ಷರು, ಆಯುಕ್ತರು ಸೇರಿದಂತೆ ಅಧಿಕಾರಿಗಳಿಗೆ ಮೊಬೈಲ್, ಸಿಮ್ಕಾರ್ಡ್ ಮತ್ತು ಕರೆನ್ಸಿ ನೀಡುವ ಬಗ್ಗೆ ವಾದಗಳು ನಡೆದವು. ಅನಿಲ್, ಯಶವಂತ್ ಮಾತನಾಡಿ, ಈ ಹಿಂದೆ ಲಕ್ಷಾಂತರ ರು.ವೆಚ್ಚ ಮಾಡಿ ವಾಕಿಟಾಕಿ ನೀಡಲಾಗಿತ್ತು. ಆದರೆ ಅದು ಮೂಲೆ ಸೇರಿವೆ. ಮೊದಲು ಅವುಗಳು ಏನಾದವು ಅಂತ ಮಾಹಿತಿ ನೀಡಿ. ಜೊತೆಗೆ ಮೊಬೈಲ್ ನೀಡುವುದಾದರೆ ಎಲ್ಲರಿಗೂ ನೀಡಿ. ಅಧಿಕಾರಿಗಳಿಗೆ ನೀಡಿದರೆ ಅವರು ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ಕರೆ ಮಾಡುವುದಿಲ್ಲ ಎಂದರು.
ಅಧಿಕಾರಿಗಳು ಮೊಬೈಲ್ ಬಂದ್ ಮಾಡಿರುತ್ತಾರೆ. ಇದರಿಂದ ಅವರು ಸಂಪರ್ಕಕ್ಕೆ ಸಿಗುವುದಿಲ್ಲ. ಬಹಳ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಈ ಬಗ್ಗೆ ಕೂಡಲೇ ತೀರ್ಮಾನವನ್ನು ಕೈಗೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಶಾಸಕ ಪ್ರಕಾಶ್ ಹೇಳಿದರು. ಅಧ್ಯಕ್ಷೆ ವಿದ್ಯಾಶ್ರೀ, ಉಪಾಧ್ಯಕ್ಷ ಇರ್ಷಾದ್, ಸದಸ್ಯರು ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement